Community Media/MARAA/Community Radio/Kannada/Production

From WikiEducator
Jump to: navigation, search



ಸಮುದಾಯ ರೇಡಿಯೊ ಉತ್ಪಾದನೆಯ ನವೀನತೆ, ಸುಸಂಬದ್ದತೆ ಒಂದು ನಿರ್ಧಿಷ್ಟ ಸ್ಥಳಕ್ಕೆ ಸಂಬಂದಿಸಿದ್ದು ಆಗಿರತಕ್ಕದ್ದು. ಸಂಶೋಧನಾ ಕ್ಷೇತ್ರಗಳಲ್ಲಿ ಹೆಚ್ಚಿನ ಗಮನ ನೀಡಿದಲ್ಲಿ ಸೂಕ್ತವಾದ ಕಾರ್ಯಕ್ರಮಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ.

ಸಾಮರ್ಥ್ಯ ವರ್ಧನೆ

ನಮ್ಮ ತರಬೇತಿ ಕಾರ್ಯಕ್ರಮದಲ್ಲಿ ಉತ್ಪಾದನಾ ವಿಧಾನ ತರಬೇತಿಯ ಜೊತೆಗೆ ಉತ್ಪಾದನೆಯಲ್ಲೂ ಭಾಗಿಯಾಗಿದೆ.ತರಬೇತಿ ನೀಡುವ ರೀತಿ ಹಾಗು ಹಂತಗಳನ್ನು ಕೆಳಗೆ ನೀಡಲಾಗಿದೆ.

ಡಿಜಿಟಲ್ ಆಡಿಯೋ

  • ಕಲಾಪನ ಮುಂದಾಳು: ಅಭ್ಯರ್ಥಿ
  • ಕಾಲಾವಧಿ : ಗರಿಷ್ಠ ೪೫ ನಿಮಿಷ
  • ಉದ್ದೇಶ: ವಿವಿಧ ಬಗೆಯ ಆಡಿಯೋ ಫಾರ್ಮಾಟ್ಸ್ ಬಗ್ಗೆ ತಿಳಿದುಕೊಳ್ಳುವುದು ಮತ್ತು ಡಿಜಿಟಲ್ ಆಡಿಯೋದಲ್ಲಿ ಕಾರ್ಯ ನಿರ್ವಹಿಸುವಾಗ ಅವುಗಳ ಪಾತ್ರದ ಬಗ್ಗೆ ಅರಿಯುವಿಕೆ.



Icon activity.jpg
Activity
ಚಟುವಟಿಕೆ
ಅಡಾಸಿಟಿಯಿಂದ ಕಾರ್ಯಕ್ರಮ ಎಡಿಟ್.JPG

ಇಬ್ಬರು ಅಭ್ಯರ್ಥಿಗಳನ್ನು ಒಂದು ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವಂತೆ ಹೇಳಿ. ಅಡಾಸಿಟಿಯೊಂದಿಗೆ ಒಂದು ಪೈಲ್ ತೆರೆಯಿರಿ ಅಭ್ಯರ್ಥಿಗಳಲ್ಲಿ ಪೈಲ್ ಗಳನ್ನು ವಿವಿಧ ಪೈಲ್ ಫಾರ್ಮಾಟ್ ಗಳಾದ mp3, wav ಮತ್ತು ogg ಯಲ್ಲಿ ಉಳಿಸಲು ಹೇಳಿ ಪ್ರತಿ ಫಾರ್ಮಾಟ್ ಒಂದಕ್ಕಿಂತ ಒಂದು ಹೇಗೆ ಭಿನ್ನ ಹಾಗೂ ಅವುಗಳ ಸಾಧಕ ಮತ್ತು ಭಾಧಕಗಳ ಬಗ್ಗೆ ಚರ್ಚೆ ನಡೆಸಿ.



ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಜಿಟಲ್ ಧ್ವನಿ ಮುದ್ರಣ (ಆಡಿಯೋ ರೆಕಾರ್ಡಿಂಗ್)

  • ಕಲಾಪದ ಮುಂದಾಳು: ಅಭ್ಯರ್ಥಿ
  • ಕಾಲಾವಧಿ: ಗರಿಷ್ಟ 45ನಿಮಿಷಗಳು
  • ಉದ್ದೇಶ: ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿ ಹಾಗೂ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಮಾಡುವುದು ಹೇಗೆಂದು ತಿಳುವಳಿಕೆ ನೀಡುತ್ತದೆ.


ನೀವು ಧ್ವನಿಯನ್ನು ಮೊಬೈಲ್ ಧ್ವನಿಮುದ್ರಕಗಳು(ರೆಕಾರ್ಡ್) ಮತ್ತು ಸ್ಥಿರ ಮುದ್ರಕಗಳಿಂದ ಧ್ವನಿಮುದ್ರಣ ಮಾಡಬಹುದಾಗಿದೆ.


ಮೊಬೈಲ್ ಧ್ವನಿಮುದ್ರಕಗಳು(ರೆಕಾರ್ಡ್) ಅಂದ್ರೆ ಅದು ಪ್ಲಾಶ್ ರೆಕಾರ್ಡರ್, ಮೊಬೈಲ್ ಪೋನ್, mp3 ಪ್ಲೆಯರ್ ಅಥವಾ ಲ್ಯಾಪ್ ಟಾಪ್ ಅಗಿರಬಹುದು. ಸ್ಥಿರ ಮುದ್ರಕಗಳು ಅಂದ್ರೆ ಮಿಕ್ಸಿಂಗ್ ಉಪಕರಣ ಅಥವಾ ನಿಮ್ಮ ಕಂಪ್ಯೂಟರ್ ಗೆ ಸ್ಥಿರವಾಗಿ ಅಲವಡಿಸಿದ ಮೈಕ್ರೋಪೋನ್ ಆಗಿರಬಹುದು.



Icon activity.jpg
Activity
ಚಟುವಟಿಕೆ

ಪ್ಲಾಶ್ ರೆಕಾರ್ಡರ್ ಬಳಸಿ ಧ್ವನಿಮುದ್ರಣ ಮಾಡಿದ ನಂತರ ಸ್ಟುಡಿಯೋ ಮೈಕ್ರೋಪೋನ್ ನಿಂದ ಧ್ವನಿ ಮುದ್ರಣ ಮಾಡಿ ವಿವಿಧ ಧ್ವನಿಗಳ ಬಗ್ಗೆ ಚರ್ಚಿಸಿ.



ಪ್ಲಾಶ್ ರೆಕಾರ್ಡರ್ ಗಳಲ್ಲಿ ಧ್ವನಿಮುದ್ರಣ

  • ಕಲಾಪದ ಮುಂದಾಳು: ಅಭ್ಯರ್ಥಿ
  • ಕಾಲಾವಧಿ: 45 ನಿಮಿಷಗಳು
  • ಉದ್ದೇಶ: ಕಾರ್ಯಕ್ಷೇತ್ರದಲ್ಲಿ ಧ್ವನಿಮುದ್ರಕ ಉಪಕರಣಗಳನ್ನು ಬಳಸಲು ಅಭ್ಯರ್ಥಿಗಳಿಗೆ ನೆರವಾಗುವುದು.



Icon activity.jpg
Activity
ಚಟುವಟಿಕೆ
ಡಿಜಿಟಲ್ ರೆಕಾರ್ಡರ್ ನಲ್ಲಿ ಧ್ವನಿ ಮುದ್ರಣ.JPG

ಪ್ಲಾಶ್ ರೆಕಾರ್ಡರ್ ಗಳಲ್ಲಿ ಧ್ವನಿಮುದ್ರಣ ಮಾಡಿ, ವಿವಿಧ ಸ್ಥಳಗಳಲ್ಲಿ ಧ್ವನಿಮುದ್ರಣ ಮಾಡಲು ಯತ್ನಿಸಿ, ಗದ್ದಲದಿಂದ ಕೂಡಿದ ಸ್ಥಳಗಳು, ನಿಶ್ಯಬ್ದವಾಗಿರುವ ಸ್ಥಳಗಳು, ವಿವಿಧ ಅಂತರದಲ್ಲಿ ಮತ್ತು ತುಂಬಾ ಗಾಳಿ ಇರುವ ಪ್ರದೇಶದಲ್ಲಿ ರೆಕಾರ್ಡ್ ಮಾಡಿ ತಾವು ಕಂಡುಹಿಡಿದಿರುವುದನ್ನು ಚರ್ಚೆ ನಡೆಸಿ ತಿಳಿದಿರುವುದನ್ನು ಪರಸ್ಪ ಹಂಚಿಕೊಳ್ಳಿ.



ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ಟುಡಿಯೋದಲ್ಲಿ ಧ್ವನಿಮುದ್ರಣ

  • ಕಲಾಪದ ಮುಂದಾಳು: ಅಭ್ಯರ್ಥಿ
  • ಕಾಲಾವಧಿ: 90 ನಿಮಿಷಗಳು
  • ಉದ್ದೇಶ: ಸ್ಟುಡಿಯೋ ಅಕ್ಷರಗಳನ್ನು ಗ್ರಹಿಸಿಕೊಳ್ಳುವುದು ಮತ್ತು ಆ ಲಕ್ಷಣಗಳ ಬಳಸುವಿಕೆ



Icon activity.jpg
Activity
ಚಟುವಟಿಕೆ
ಧ್ವನಿಮುದ್ರಣ.JPG

ವಿವಿಧ ಮೈಕ್ರೋಪೋನ್ ಗಳಲ್ಲಿ ವಿವಿಧ ಧ್ವನಿನಲ್ಲಿ (effect) ಧ್ವನಿಮುದ್ರಣ ಮಾಡಲು ಅಭ್ಯರ್ಥಿಗಳಲ್ಲಿ ಹೇಳಿ.

ವಿವಿಧ ಅಂತರದಲ್ಲಿ ನಿಂತು ಮೈಕ್ರೋಪೋನಲ್ಲಿ ಮಾತನಾಡಿ ನಂತರ ಮುದ್ರಣವನ್ನು ಪುನರಾವರ್ತನೆ (ಪ್ಲೇ ಬ್ಯಾಕ್) ಮಾಡಿ ಧ್ವನಿಯಲ್ಲಿ ಉಂಟಾದ ಬದಲಾವಣೆಯನ್ನು ಗಮನಿಸಿ.



ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೇಡಿಯೋ

  • ಕಲಾಪದ ಮುಂದಾಳು: ಅಭ್ಯರ್ಥಿ
  • ಕಾಲಾವಧಿ: ಗರಿಷ್ಟ 60 ನಿಮಿಷಗಳು
  • ಉದ್ದೇಶ: ಧ್ವನಿಮುದ್ರಣದಿಂದ ಸ್ವಾಗತದವರೆಗಿರುವ(reception) ತಾಂತ್ರಿಕ ಪ್ರಸಾರದ ಬಗ್ಗೆ ಅಭ್ಯರ್ಥಿಗಳಿಗೆ ಮನವರಿಕೆ ಮಾಡುವುದು.



Icon activity.jpg
Activity
ಚಟುವಟಿಕೆ:
Studio Recording.JPG
ಸ್ಟುಡಿಯೋದಲ್ಲಿ ಯತಾರ್ಥ ಶಬ್ದದ ಹಾದಿಯ ಬಗ್ಗೆ ನಿರೂಪಣೆ



ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಕಲನ

  • ಕಲಾಪದ ಮುಂದಾಳು: ಅಭ್ಯರ್ಥಿ
  • ಕಾಲಾವಧಿ: ಗರಿಷ್ಟ 120 ನಿಮಿಷಗಳು
  • ಉದ್ದೇಶ: ಅಡಾಸಿಟಿ ಬಳಸಿ ಡಿಜಿಟಲ್ ಧ್ವನಿಯನ್ನು ಸಂಕಲನ(Editing)ಮಾಡುವುದರ ಬಗ್ಗೆ ಅಭ್ಯರ್ಥಿಗಳಿಗೆ ಮನವರಿಕೆ ಮಾಡುವುದು.



Icon activity.jpg
Activity
ಚಟುವಟಿಕೆ
ಅಡಾಸಿಟಿ.JPG

ಸ್ಥಾಪನೆ, ತೆರೆಯುವಿಕೆ ಮತ್ತು ಅಡಾಸಿಟಿಯ ಲಕ್ಷಣಗಳನ್ನು ನಿರೂಪಿಸಲು ಪ್ರೊಜೆಕ್ಟರ್ ಬಳಸಿ. ಈ ಮೊದಲು ಪ್ರೊಜೆಕ್ಟರ್ ನಲ್ಲಿ ತೋರಿಸಿದ್ದನ್ನು ಪುನರಾವರ್ತನೆ ನಡೆಸುವಂತೆ ಅಭ್ಯರ್ಥಿಗಳಲ್ಲಿ ಹೇಳಿ.

ಪ್ರಶ್ನೆಗಳು, ಪ್ರತಿಕ್ರಿಯೆಗಳು




ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ