Community Media/MARAA/Community Radio/Kannada/Production/Digital audio
ಡಿಜಿಟಲ್ ಆಡಿಯೋದ ಪೈಲ್ ಫಾರ್ಮಾಟ್ ಗಳು
ಟೇಪ್ ಜೊತೆ ಕಾರ್ಯನಿರ್ವಹಿಸುವುದು ತುಂಬಾ ಸುಲಭ. ಯಾಕೆಂದರೆ ನೀವು ಆಡಿಯೋವನ್ನು( ಧ್ವನಿಯನ್ನು ) ಯಾವ ಫಾರ್ಮಾಟ್ ನಲ್ಲಿ ಧ್ವನಿಮುದ್ರಣ ಮಾಡುತ್ತೀರಿ ಎಂಬುದರ ಬಗ್ಗೆ ಆಲೋಚಿಸಬೇಕಾಗಿಲ್ಲ. ಟೇಪ್ ನ ಭೌತಿಕ ರೂಪಕ್ಕೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದೀಗ ಕಂಪ್ಯೂಟರ್ ಗಳನ್ನು ಬಳಸುವುದರಿಂದಾಗಿ ಡಿಜಿಟಲ್ ಆಡಿಯೋವು ಅವುಗಳನ್ನು ಹೊಸ ಒಡಂಬಡಿಕೆಯಾಗಿ ಸ್ವೀಕರಿಸುವುದು. ಮೂಲತಃ ಡಿಜಿಟಲ್ ಆಡಿಯೋ ಅಂದರೆ, ಶಬ್ದವು ಪುನರುತ್ಪಾದನೆಗೆ ಡಿಜಿಟಲ್ ಸಂಕೇತಗಳನ್ನು ಬಳಸುವುದಾಗಿದೆ. ಇದು ಅನಲಾಗ್ ನಿಂದ ಡಿಜಿಟಲ್ ಮಾರ್ಪಾಟು ಮಾಡುವಿಕೆ. ಡಿಜಿಟಲ್ ನಿಂದ ಅನಲಾಗ್ ಮಾರ್ಪಾಟು ಮಾಡುವುದು. ಆಡಿಯೋದ ಸಂಗ್ರಹ ಮತ್ತು ಪ್ರಸಾರವನ್ನು ಒಳಗೊಂಡಿದೆ. ಡಿಜಿಟಲ್ ಆಡಿಯೋ ಸಂಕೇತಗಳನ್ನು ಕಾಂಪ್ಯಾಕ್ ಡಿಸ್ಕ್ (ಸಿ.ಡಿ), ಪ್ಲಾಶ್ ಡ್ರೈವ್, mp3 ಪ್ಲೆಯರ್, ಹಾರ್ಡ್ ಡ್ರೈವ್ ಮತ್ತು ಡಿಜಿಟಲ್ ಪ್ರಮಾಣ (ಡಾಟಾ) ಸಂಗ್ರಹಗಳಲ್ಲಿ ಇದನ್ನು ಸಂಗ್ರಹಿಸಲಾಗುತ್ತದೆ. ಆಡಿಯೋ ಡಾಟ ಕಂಪ್ರೇಷನ್ (ಹಿಂಡು) ತಂತ್ರಗಳಾದ mp3, ಸುಧಾರಿತ ಧ್ವನಿ ನಿಯಮ (Advanced Audio Coding [AAC]), Ogg, Vorbis,Windows Media Audio ಅಥವಾ Flac ಮೊದಲಾದವುಗಳನ್ನು ಹೆಚ್ಚಾಗಿ ಬಳಸಲಾಗಿದೆ.
ನೀವು ಡಿಜಿಟಲ್ ಆಡಿಯೋ (ಧ್ವನಿ) ಬಗ್ಗೆ ಹೇಳುವುದಾದರೆ ನೀವು ಸಾಮಾನ್ಯವಾಗಿ mp3 ಬಗ್ಗೆ ಹೇಳುವಿರಿ ಇದೀಗ mp3 ಅಂದರೆ MPEG-1 Audio Layer 3 ಇದು ನಷ್ಟದ ಪ್ರಮಾಣವನ್ನು (ಡಾಟ) ಕಂಪ್ರೇಷನ್ (ಹಿಂಡು) ರೀತಿಯಲ್ಲಿ ಧ್ವನಿಯನ್ನು ಸಾಂಕೇತಿಕ ಸಂದೇಶವನ್ನು ಒದಗಿಸುವ ಹಾಗೆ ಮಾಡುತ್ತದೆ. ಅಂದರೆ ಪ್ರಮಾಣವನ್ನು (ಡಾಟ) ಮೊದಲು ಹಿಂಡಲಾಗುತ್ತದೆ. (ಕಂಪ್ರೆಸ್ ಮಾಡಲಾಗುತ್ತದೆ) ತದನಂತರ ವಿಸ್ತರಿಸುವಂತೆ ಮಾಡಲಾಗುತ್ತದೆ. ಇದು ಮೂಲ ಪೈಲ್ (ಕಡತ) ನಂತಾಗಿರುವುದಿಲ್ಲ ಬದಲಾಗಿ ಅದರಷ್ಟೆ ಸೌಮ್ಯತೆಯನ್ನು ಹೊಂದಿದ್ದು ನಿಮಗೆ ವ್ಯತ್ಯಾಸವನ್ನು ಕಂಡುಹಿಡಿಯಲು ಆಗುವುದಿಲ್ಲ. 1991 ಇದು ಉತ್ತಮ ಪ್ರಮಾಣವಾಗಿ (ಸ್ಟಾಂಡರ್ಡ್) ಅಂಗೀಕರಿಸಲ್ಪಟ್ಟು ಇದೀಗ mp3 ಭೌಗೋಳಿಕವಾಗಿ ಬಳಸಲ್ಪಡುವ ಉತ್ತಮ ಪ್ರಮಾಣ (ಸ್ಟಾಂಡರ್ಡ್) ಆಗಿದೆ .MPEG ಅಂದರೆ Moving Pictures Expert Group. ಇದು ಆಡಿಯೋ ಮತ್ತು ವಿಡಿಯೊಗಳಿಗೆ ಉತ್ತಮ ಪ್ರಮಾಣವನ್ನು (ಸ್ಟಾಂಡರ್ಡ್) ನೀಡುವ ಗುಂಪಾಗಿದೆ.
ಅಂದಹಾಗೆ mp3ಯನ್ನು ಬಳಸುವ ಒಂದು ಉಪಯೋಗ ಏನೆಂದರೆ ಇದು ಕಂಪ್ಯೂಟರ್ ನಲ್ಲಿ ಅತೀ ಕಡಿಮೆ ಸ್ಥಳವನ್ನು (ಜಾಗವನ್ನು) ವಿನಿಯೋಗಿಸುತ್ತದೆ.
ಇತರ ಸಾಮಾನ್ಯ ಪಾರ್ಮಾಟ್ ಗಳು ಅಂದರೆ ವಿಂಡೊಸ್ ಮೀಡಿಯಾ ಆಡಿಯೋ (wma) ಇದು ಮೈಕ್ರೋಸಾಪ್ಟ್ ಕಾರ್ಪೋರೇಷನ್ ನಿಂದ ಅಭಿವೃದ್ದಿಪಡಿಸಿದ ಆಡಿಯೋ ಕಂಪ್ರೆಷನ್ (ಹಿಂಡು) ತಂತ್ರವಾಗಿದೆ.
ಮುಖ್ಯ ಪುಟಕ್ಕೆ ವಾಪಸ್ಸು ಹೋಗಲು ಇಲ್ಲಿ ಕ್ಲಿಕ್ಕಿಸಿ