Community Media/MARAA/Community Radio/Kannada/Production/Flash Recorder

From WikiEducator
Jump to: navigation, search

ಪ್ಲಾಶ್ ರೆಕಾರ್ಡರ್( ಧ್ವನಿಮುದ್ರಕ)ಗಳನ್ನು ಬಳಸಿ

ಸಮುದಾಯ ರೇಡಿಯೋದಲ್ಲಿ ಇದೊಂದು ಪ್ರಧಾನ ಘಟಕವಾಗಿದೆ. ಯಾಕೆಂದರೆ ಕೆಲವೂಂದು ಬಾರಿ ಸಮುದಾಯದ ಸದಸ್ಯರಿಗೆ ಧ್ವನಿಮುದ್ರಣ ಮಾಡಲು ಸ್ಟುಡಿಯೋಗೆ ಬರಬೇಕಾದರೆ ತುಂಬಾ ದೂರವಿರುತ್ತದೆ ಇಲ್ಲವೇ ಸಮಯದ ಅಭಾವವಿರುತ್ತದೆ. ಹೆಚ್ಚಿನ ಬಾರಿ ನೀವು ಅವರ ಬಳಿ ಹೋಗಬೆಕಾಗುತ್ತದೆ ಅಂದರೆ ಕ್ಷೆತ್ರದಲ್ಲಿ ಧ್ವನಿಮುದ್ರಣ ಮಾಡಬೇಕಾಗುತ್ತದೆ.

DSC00944.JPG

ಈ ಮೂಲಕ ಪ್ಲಾಶ್ ಧ್ವನಿಮುದ್ರಕಗಳು ವರದಿಗಾರರಿಗೆ ಮತ್ತು ಸಮುದಾಯ ರೇಡಿಯೋ ಉತ್ಪಾದಕರಿಗೆ ಉಪಯುಕ್ತ ಉಪಕರಣವಾಗಿದೆ. ಇವುಗಳು ಸಾಮಾನ್ಯವಾಗಿ ಅಡಕ ಸಾಧನಗಳಾಗಿದ್ದು, ಧ್ವನಿಯನ್ನು ಮುದ್ರಣ ಮಾಡುತ್ತವೆ. ಇವುಗಳನ್ನು mp3 ಅಥವಾ wma ಡಿಜಿಟಲ್ ಪಾರ್ಮಾಟ್ ಗಳಲ್ಲಿ ಸಂಗ್ರಹಿಸಿಲಾಗುವುದು. ಈ ಸಂಗ್ರಹವು ಆಂತರಿಕ ಸ್ಮರಣೆ ಕಾರ್ಡ್ ಅಥವಾ ಬಾಹ್ಯ ಸ್ಮರಣೆ ಕಾರ್ಡ್ ನಲ್ಲಿ ಸಂಗ್ರಹವಾಗುತ್ತದೆ. ಇದು ಧ್ವನಿ ಮುದ್ರಕ ತುಂಬುವಾಗ ಸ್ಥಳಾಂತರಿಸಲ್ಪಡುತ್ತದೆ. ಧ್ವನಿಮುದ್ರಣ ಮಾಡುವಾಗ ಮುದ್ರಣದ ಮಟ್ಟಗಳನ್ನು ಆಲಿಸಲು ಮತ್ತು ಮುದ್ರಣ ಆದ ನಂತರ ಆಲಿಸಲು ಹಾಗೂ ವ್ಯಕ್ತಿಯೊಬ್ಬರು ಧ್ವನಿಮುದ್ರಣ ಮಾಡುತ್ತಿರುವಾಗ ಹೊರಗಿನಿಂದ ಬರುವ ಶಬ್ದಗಳನ್ನು ತಡೆಗಟ್ಟಲು ಹೆಡ್ ಪೋನ್ ಜಾಕ್ ಒಂದನ್ನ ಒದಗಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಧ್ವನಿಮುದ್ರಕಗಳಿಗೆ ಬಾಹ್ಯ ಮೈಕ್ರೋಪೋನ್ ಗಳನ್ನು ಒಳಸೇರಿಸಲು ಇನ್ ಪುಟ್ ಜಾಕ್ ಇರುತ್ತದೆ. ತೆರಬಲ್ಲ ಡಿಜಿಟಲ್ ಧ್ವನಿ ಮುದ್ರಕಗಳಿಗೆ ಉದಾಹರಣೆ ಇಲ್ಲಿದೆ ನಿಮ್ಮ ಧ್ವನಿಮುದ್ರಕಕ್ಕೆ ತೆರೆಬಲ್ಲ ಬಾಹ್ಯ ಮೈಕ್ರೋಪೋನ್ ಗೆ ಉದಾಹರಣೆ ಇಲ್ಲಿದೆ


ಮಾರುಕಟ್ಟೆಯಲ್ಲಿ ಹಲವಾರು ವಿಧದ ಕಂಪನಿಯ ಬ್ರಾಂಡ್ ಗಳು ಲಭ್ಯವಾಗಿದೆ. ನಿಮ್ಮ ಅಗತ್ಯಕ್ಕೆ ತಕ್ಕಂತಿರುವವುಗಳನ್ನು ನೋಡಿ ನಿಮಗೆ ಇಷ್ಟವಾದ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳುವುದು ನಿಮ್ಮಿಷ್ಟ. Zoom, Sony, Olympus, Transcend ಮೊದಲಾದವು ಪ್ಲಾಶ್ ಧ್ವನಿಮುದ್ರಕಗಳಾಗಿವೆ.


ಸಾಮಾನ್ಯ ಸಲಹೆಗಳು

ಧ್ವನಿಮುದ್ರಣ ಮಾಡಲಿರುವವರು ಕೆಲವೊಂದು ಸಲಹೆಗಳನ್ನು ನೀವು ಜ್ಞಾಪಕದಲ್ಲಿಟ್ಟುಕೊಂಡರೆ ನಿಮಗೆ ಹೆಚ್ಚು ಉಪಯುಕ್ತವಾಗಬಹುದು.

  • ಯಾವುದೇ ವ್ಯಕ್ತಿಯು ಮಾತನಾಡುವುದಾದರೆ ಅಲ್ಲಿ ಯಾವುದೇ ಗದ್ದಲಗಳು ಇಲ್ಲದಂತೆ ನೋಡಿಕೊಳ್ಳಿ.
  • ಎಲ್ಲಾ ಮೊಬೈಲ್ ಪೋನುಗಳನ್ನು ನಿಶಬ್ದದಲ್ಲಿ ಇಡದಂತೆ ಸ್ವಿಚ್ ಆಪ್ ಮಾಡಿರತಕ್ಕದ್ದು. ಮೊಬೈಲ್ ಗಳು ಸ್ವೀಕರಿಸುವ ಸಂಕೇತಗಳು ಧ್ವನಿಮುದ್ರಣದಲ್ಲಿ ನೊಂದಣಿಯಾಗುವುದು.
  • ಸ್ಟುಡಿಯೋದಲ್ಲಿ ಮಹಿಳೆಯೊಬ್ಬರು ರೆಕಾರ್ಡಿಂಗ್ ಮಾಡುತ್ತಿದ್ದರೆ ಅವರಲ್ಲಿ ಅವರ ಬಳೆಗಳನ್ನು ತೆಗೆದಿರಿಸಲು ಹೇಳಿ ಅಥವಾ ಇತರೆ ಯಾವುದೇ ಸದ್ದನ್ನುಂಟುಮಾಡುವಂತಹ ವೈಯಕ್ತಿಕ ತೊಡುಗೆಗಳನ್ನು ತೆಗೆದಿರಿಸಲು ಹೇಳಿ.
  • ನೀವು ಗಾಳಿಯಿರುವ ಪ್ರದೇಶದಲ್ಲಿ ಧ್ವನಿಮುದ್ರಣ ಮಾಡುತ್ತಿದ್ದರೆ, ಗಾಳಿ ಬೀಸುವ ದಿಕ್ಕಿಗೆ ವಿರುದ್ದವಾಗಿ ನೀವು ನಿಂತಿರಬೇಕು. ಈ ಮೂಲಕ ನಿಮ್ಮ ದೇಹವು ಗಾಳಿಗೆ ಅಡ್ಡವಾಗಿ ಹೆಚ್ಚು ಶಬ್ದಗಳು ಕೇಳಿಸಲಾರದು.
  • ಧ್ವನಿಮುದ್ರಣ ಮಾಡುವುದಕ್ಕಿಂತ ಮೊದಲು ನಿಮ್ಮ ಧ್ವನಿಮುದ್ರಕ ಮಟ್ಟವನ್ನು ತೋರಿಸದಿದ್ದರೆ ನೀವು ಮೈಕ್ರೋಪೋನಲ್ಲಿ ಮಾತನಾಡುವ ಮೂಲಕ ಚಿಕ್ಕದೊಂದು ಪರೀಕ್ಷೆಯನ್ನು ಮಾಡಬಹುದು. ಮಟ್ಟವನ್ನು ಆಲಿಸುವ ಮೂಲದಿಂದ ಮೈಕ್ರೋಪೋನನ್ನು ಎಷ್ಟು ದೂರಕ್ಕಿರಿಸಬೇಕೆಂಬುದನ್ನು ತೀರ್ಮಾನಿಸಬಲ್ಲಿರಿ.
  • ನೀವು ಕ್ಷೇತ್ರದಲ್ಲಿ ಧ್ವನಿಮುದ್ರಣ ಮಾಡುವುದಾದರೆ ಮೈಕ್ರೋಪೋನನ್ನು ನೀವೇ ಹಿಡಿದುಕೊಳ್ಳಿ ಅದನ್ನು ನಿಮ್ಮ ಜೊತೆ ಮಾತನಾಡುವವರ ಕೈಲಿ ನೀಡಬೇಡಿ ಯಾಕೆಂದರೆ ಅವರು ಅದನ್ನ ತುಂಬಾ ದೂರಕ್ಕೆ ಅಥವಾ ತುಂಬಾ ಹತ್ತಿರಕ್ಕೆ ಹಿಡಿದುಕೊಳ್ಳುವ ಸಾದ್ಯತೆ ಇದೆ.
    Field Recording.JPG
  • ನಿಮ್ಮ ಮೈಕ್ರೋಪೋನಿಗೆ ಪಾಪ್ ಪಿಲ್ಟರ್ ಗಳನ್ನ ಬಳಸಿ ಇದರಿಂಗಾಗಿ ಪಿ, ಮೊದಲಾದ ಸ್ವರಾಕ್ಷರಗಳಿಗೆ ಯಾವುದೇ ಅಡಚಣೆಯಾಗಲಾರದು.
  • ತಂತಿಯ ಕೊನೆಯ ಭಾಗವು ಮೈಕ್ರೋಪೋನಿಗೆ ಸಂಪರ್ಕವಾಗಿದೆ ಎಂಬುದನ್ನ ಖಚಿತಪಡಿಸಿಕೊಳ್ಳಿ. ಅದರಲ್ಲಿ ಎರಡು ರಿಂಗ್/ಬ್ಯಾಂಡ್ ಗಳಿದ್ದರೆ ಅದು ಸ್ಟಿರಿಯೋದಲ್ಲಿ ಧ್ವನಿಮುದ್ರಣ ಅಥವಾ ಮುದ್ರಣದ ನಂತರ ಕೇಳಿಸುತ್ತದೆ.(ಪ್ಲೇ ಬ್ಯಾಕ್)ಒಂದೇ ಒಂದು ಲೈನ್ ಇದ್ದರೆ ಮೋನೊ(mono)ದಲ್ಲಿ ಧ್ವನಿಮುದ್ರಣ ಅಥವಾ ಮುದ್ರಣದ ನಂತರ ಕೇಳಿಸುತ್ತದೆ.(ಪ್ಲೇ ಬ್ಯಾಕ್)
  • ಕ್ಷೇತ್ರದಲ್ಲಿ ಧ್ವನಿಮುದ್ರಣ ಮಾಡಲು ಹೋಗುವ ಮುನ್ನ ನಿಮ್ಮಲ್ಲಿ ಉತ್ತಮ ಬ್ಯಾಟರಿ ಹಾಗೂ ರೆಕಾರ್ಡರ್ ನಲ್ಲಿ ತುಂಬಾ ಉಚಿತ ಸ್ಮರಣೆಯ ಜಾಗ(free space) ಇದೆಯೇ ಎಂಬುದನ್ನ ಖಚಿತಪಡಿಸಿಕೊಳ್ಳಿ.
  • ನೀವು ಧ್ವನಿಮುದ್ರಣ ಮಾಡುವ ಧ್ವನಿಯು ಕೆಟ್ಟದಾಗಿದೆ ಎಂದು ಕಂಡುಬಂದರೆ, ಇನ್ನೊಂದು ಬಾರಿ ಅದನ್ನ ಪುನರಾವರ್ತಿಸಲು ಹೇಳುವಂತೆ ಕೇಳಲು ಹಿಂಜರಿಯದಿರಿ. ಮುದ್ರಣದ ನಂತರ ಪ್ರಾಯಶ್ಚಿತಪಡುವುದಕ್ಕಿಂತಲೂ ಒಳ್ಳೆಯದಲ್ಲವೇ.


ಮುಖ್ಯ ಪುಟಕ್ಕೆ ವಾಪಸ್ಸು ಹೋಗಲು ಇಲ್ಲಿ ಕ್ಲಿಕ್ಕಿಸಿ