Community Media/MARAA/Community Radio/Kannada/Conceptual Clarity

From WikiEducator
Jump to: navigation, search
ಪೀಠಿಕೆ

ಸಮುದಾಯ ರೇಡಿಯೋ ಅಂದರೆ ಒಂದು ನಿರ್ದಿಷ್ಟ ಸಮುದಾಯವೊಂದರ ಸದಸ್ಯರಿಂದ ನಡೆಸಲ್ಪಡುವ, ಸಮುದಾಯದ ಒಡೆತನಕ್ಕೊಳಪಟ್ಟ ಮತ್ತು ಸಮುದಾಯದಲ್ಲೇ ಇರುವಂತಹ ರೇಡಿಯೋ ವ್ಯವಸ್ಠೆ.

ಅಂತರ್ಜಾಲ ವ್ಯವಸ್ಠೆಯ ಉದಯದ ನಂತರ,ರೇಡಿಯೋ ನಿಲಯದ ಸ್ಥಳದ ವಿಷಯದಲ್ಲಿ ರಾಜಿಮಾಡಿಕೊಳ್ಳಬಹುದಾದರೂ, ಉಳಿದ ವಿಷಯಗಳು ಸಮುದಾಯ ರೇಡಿಯೋ ವ್ಯವಸ್ಠೆಗೆ ಮುಖ್ಯವಾದುವಾಗಿವೆ.

ಸಮುದಾಯ ರೇಡಿಯೋ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವಿಕೆ

ನೀವು ಯಾವುದಾದರು ಸರ್ಕಾರೇತರ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆ ಅಥವಾ ವ್ಯವಸಾಯ ವಿಶ್ವವಿದ್ಯಾನಿಲಯದವರಾಗಿದ್ದು ಒಂದು ಸಮುದಾಯ ರೇಡಿಯೋವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ನೀವು ಮಾಡಬೇಕಾಗಿರುವ ಮೊದಲ ಕೆಲಸವೆಂದರೆ ಸಮುದಾಯ ರೇಡಿಯೋವಿನ ಪರಿಕಲ್ಪನೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನುಂಟು ಮಾಡುವುದು. ಅಂದರೆ ಸುಗಮ್ಯವಾದ ಸ್ವಸಹಾಯದಂತಹ ಸಮುದಾಯಗಳಿಗೆ ಭೇಟಿ ನೀಡಿ ಅವರು ಎಷ್ಟರಮಟ್ಟಿಗೆ ಈ ರೇಡಿಯೋ ಕೇಂದ್ರದ ಬಗ್ಗೆ ಉತ್ಸಾಹಿತರಾಗಿದ್ದಾರೆ ಎನ್ನುವುದರ ಬಗ್ಗೆ ಚರ್ಚಿಸುವುದು. ಮುಂದೆ ಆ ಸಮುದಾಯಕ್ಕೆ ನಿಜಕ್ಕೂ ಒಂದು ರೇಡಿಯೋ ಕೇಂದ್ರದ ಅಗತ್ಯವಿದೆಯೇ ಎಂಬುದನ್ನು ಕಂಡುಕೊಂಡು ನಂತರ ರೇಡಿಯೋ ಕೆಂದ್ರ ಸ್ಥಾಪನೆ ಎಷ್ಟರ ಮಟ್ಟಿಗೆ ಆಗುತ್ತದೆ ಎಂಬುದರ ಜೊತೆಗೆ ಇತರ ಸಮೂಹಮಾಧ್ಯಮಗಳಾದ ದೂರದರ್ಶನ, ಪತ್ರಿಕೆಗಳ ಪ್ರಭಾವವನ್ನೂ ಸಮೀಕ್ಷೆ ನಡೆಸಬೇಕು. ಅದರೊಟ್ಟಿಗೆ ಎಫ್ ಎಂ(FM) ಸೌಲಭ್ಯ ಹೊಂದಿರುವ ಮೊಬೈಲ್ ಗಳನ್ನು ಹೊಂದಿರುವವರೆಷ್ಟು ಜನ, ಎಂಬುದನ್ನೂ ತಿಳಿದುಕೊಂಡರೆ ಕೇಳುಗರ ಸಂಖ್ಯೆ ಬಗ್ಗೆ ಒಂದು ಮಾಹಿತಿ ದೊರಕಿದ ಹಾಗಾಗುತ್ತದೆ.

ಸ್ಥಾಪನೆ

ಸಮುದಾಯ ರೇಡಿಯೋ ಕೇಂದ್ರ ಬೇಕೇ ಬೇಕು ಎಂಬುದಾದಲ್ಲಿ, ಅದು ಕಾರ್ಯರೂಪಕ್ಕೆ ತರಬಹುದಾದ ಯೋಜನೆ ಎಂಬುದು ನಿಮಗೆ ಮನವರಿಕೆಯಾದಲ್ಲಿ ಮೊದಲು ನೀವು ಮಾಡಬೇಕಾದ ಕೆಲಸವೆಂದರೆ ಸಮುದಾಯ ರೇಡಿಯೋ ಕೇಂದ್ರ ಸ್ಥಾಪನೆಗೆ ಒಂದು ಅನುಕೂಲವಾದ ಜಾಗವನ್ನು ಗುರುತಿಸುವುದು. ಆ ಜಾಗ ಕನಿಷ್ಟ ಪಕ್ಷ ಐದು ವರ್ಷಗಳು ನಮ್ಮ ಕಾರ್ಯಕ್ಕೆ ಒದಗುವಂತಿರಬೇಕು ಹಾಗೂ ಯಾವುದೇ ಕಾನೂನಿನ ಸಮಸ್ಯೆ ಎದುರಾಗಬಾರದು. ಸಮುದಾಯದ ಎಲ್ಲ ಉಪವಿಭಾಗಗಳಿಗೆ ಪ್ರವೇಶಿಸಲು ಸುಲಭವಾಗಿರಬೇಕು ಮತ್ತು ಆದಷ್ಟು ಪ್ರಶಾಂತವಾದ ಜಾಗದಲ್ಲಿರಬೇಕು. ಅಂತಹ ಜಾಗವೊಂದು ಸಿಕ್ಕಿದ ಮೇಲೆ ಆ ಸ್ಥಳದ GPS (Global Possession System) ನಿರ್ದೇಶನಾಂಕಗಳನ್ನು ಹುಡುಕಿ ಅವುಗಳನ್ನು ಔನ್ನತ್ಯ/ಎತ್ತರದ ಮಾಹಿತಿಯೊಂದಿಗೆ ಒಂದರಪಕ್ಕದಲ್ಲೊಂದನ್ನಿಟ್ಟು ಇಟ್ಟು ಸರಿಯಾದ ಸಂಕೇತ ಸಾಮರ್ಥ್ಯವನ್ನು ಪರೀಕ್ಷಿಸಬೇಕು. ತೃಪ್ತಿದಾಯಕವಾದಲ್ಲಿ ಹಾರ್ಡ್ವೇರ್ ಗಳನ್ನು ಕ್ರೋಢಿಕರಿಸಲು ಪ್ರಾರಂಭಿಸಬೇಕು

ಹಾರ್ಡ್ ವೇರ್ ಸ್ಥಾಪನೆ

ಸಮುದಾಯ ರೇಡಿಯೋದ ಸ್ಥಾಪನಾ ಕಾರ್ಯಗಳು ಕಾರ್ಯಾರಂಭ ಮಾಡುವುದಕ್ಕೆ ಬೇಕಾದ ಎರಡು ಮುಖ್ಯ ಘಟಕಗಳು

 • ಉತ್ಪಾದನೆ
 • ಪ್ರಸರಣ


ಉತ್ಪಾದನೆಯಲ್ಲಿ ಬೇಕಾಗುವ ಘಟಕಗಳು

DSC01994.JPG
 • ಸ್ಟುಡಿಯೋ ಮತ್ತು ಧ್ವನಿ ಸಂಬಂಧಿ ಸಲಕರಣೆಗಳು.(Acoustics for your studio)
 • ಮಿಕ್ಸಿಂಗ್ ಉಪಕರಣ (Mixing Console)
 • ಹೈಬ್ರಿಡ್ ಯೂನಿಟ್ (Hybrid Unit)
 • ಆಡಿಯೋವರ್ಕ್ ಸ್ಟೇಷನ್ ಮತ್ತು ಸೌಂಡ್ ಕಾರ್ಡ್ (Audio workstation with sound card)
 • ಮೈಕ್ರೋಫೋನ್ (Microphones)
 • ಹೆಡ್ ಪೋನ್ (Headphones)
 • ದ್ವನಿ ಮುದ್ರಕಗಳು/ರೆಕಾರ್ಡರ್ಸ್ (Flash recorders)
 • ಮಾನಿಟರಿಂಗ್ ಸ್ಪೀಕರ್ (Monitoring speakers)
 • ಕೇಬಲ್ ಮತ್ತು ಕನೆಕ್ಟರ್ (Cables and connectors)
 • ಯುಪಿಎಸ್ (UPS)
(Comment.gif: Only if your studio location is extremely dusty and very hot/humid, then you could go in for air conditioning)
DSC02128.JPG

ಪ್ರಸರಣದಲ್ಲಿ ಬೇಕಾಗುವ ಘಟಕಗಳು

 • ಎಫ್.ಎಂ ಟ್ರಾನ್ಸ್ ಮೀಟರ್ (FM Transmitter (50 Watts))
 • ಆಂಟೇನಾ (Antenna)
 • Feeder Cable (Foam Feed) of approximately 50 meters

ತಂತ್ರಾಂಶ ಸ್ಥಾಪನೆ

ಸಮುದಾಯ ರೇಡಿಯೋ ಕೇಂದ್ರದ ಸ್ಥಾಪನೆಗೆ ನಾವು ನಿಮಗೆ ಸೂಚಿಸುವುದೇನೆಂದರೆ ಸಾಧ್ಯವಾದಷ್ಟು ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನೇ ಬಳಸಿ. ಇವು ಹೊಸದಾಗಿ ಕಲಿಯುವವರಿಗೆ ಹಾಗೂ ಈಗಾಗಲೇ ಉಪಯೋಗಿಸುತ್ತಿರುವವರಿಗೂ ಲಭ್ಯವಿದೆ. ಆಪರೇಟಿಂಗ್ ಸಿಸ್ಟಮ್ ಗಳಿಗೆ ಉಬುಂಟು ಸ್ಟುಡಿಯೋ ಬಳಸಬಹುದು ಹಾಗೂ ದ್ವನಿಮುದ್ರಣ ಮತ್ತು ಸಂಕಲನಕ್ಕೆ(ಎಡಿಟಿಂಗ್) ಅಡಾಸಿಟಿಯನ್ನು ಪ್ರಾರಂಭಿಸಬಹುದು.

ನಿಮ್ಮ ಕಂಪ್ಯೂಟರ್ ಗಳಿಗೆ ಸಂಬಧಪಟ್ಟಂತೆ ಈ ವಿನ್ಯಾಸ ಸೂಕ್ತ

 • 80 GB Hard drive capacity
 • 1 GB RAM
 • DVD ROM (preferably DVD writer)
 • An external sound card (not critical but aim towards having one)

ಧಾರಣ ಶಕ್ತಿಯ ಬೆಳವಣಿಗೆ

DSC02141.JPG

ಒಮ್ಮೆ ರೇಡಿಯೋ ಕೆಂದ್ರ ಸ್ಥಾಪನೆಯಾದ ನಂತರ ಸಮುದಾಯದ ಸದಸ್ಯರುಗಳಲ್ಲಿ ರೇಡಿಯೋ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮದ ನಿರ್ಮಾಪಕರಾಗಿ, ಕಂಠದಾನ ಕಲಾವಿದರಾಗಿ, ಹಾಡುಗಾರರಾಗಿ ಭಾಗವಹಿಸಲು ಇಚ್ಚೆಯುಳ್ಳವರನ್ನು ಗುರುತಿಸಬೇಕು. ಈ ಸದಸ್ಯರಿಗೆ ನಿರ್ಮಾಣದ ನೈಪುಣ್ಯತೆಯನ್ನು ನಿಯಮಗಳಿಗನುಸಾರವಾಗಿ ಕಲಿಸಬೇಕು. ನಮ್ಮ ಸಲಹೆ ಏನೆಂದರೆ ಸಮುದಾಯದ ಕಾರ್ಯಕ್ರಮಗಳನ್ನು ನೀವು ನಿರ್ಧರಿಸುವುದಕ್ಕಿಂತ ಸಮುದಾಯದ ಸದಸ್ಯರೇ ತಮಗೆ ಬೇಕಾದಂತಹ ಕಾರ್ಯಕ್ರಮಗಳುನ್ನು ರೂಪಿಸುವಂತಾದರೆ ಒಳ್ಳೆಯದು. ನಿಯಮ ಉಲ್ಲಂಘನೆಯಾಗುವಂತಹ ಸಮಯದಲ್ಲಿ ಮಾತ್ರ ಅವರಿಗೆ ಮಾರ್ಗದರ್ಶನ ನೀಡಬೇಕು. ಆದರೂ ಸಮುದಾಯದ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಮೊದಲು ರೇಡಿಯೋವಿನ ಕ್ರಮ ವ್ಯವಸ್ಥೆಯ ಬಗ್ಗೆ ಅವರಿಗೆ ತಿಳಿಸುವಂತಹ ಕಾರ್ಯಗಾರವನ್ನು ರೂಪಿಸಬೇಕು. ಅದರಲ್ಲಿ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಕಾರ್ಯಕ್ರಮವನ್ನು ರೂಪಿಸುವಂತಹ ಕೌಶಲ್ಯವನ್ನು ಅವರಿಗೆ ತಿಳಿಸಿಕೊಡಬೇಕು. ಕೆಲವು ಸಂದರ್ಭಗಳಲ್ಲಿ ನಿಯಮಗಳನ್ನೂ ಮೀರಿ ಹೊಸತನದಿಂದ ಕೂಡಿದ ಕಾರ್ಯಕ್ರಮಗಳನ್ನು ರೂಪಿಸುವ ಅವಕಾಶ ಅವರಿಗೆ ನೀಡಬೇಕು.


ಮರ ಸಂಸ್ಥೆಯು ಭಾಗವಹಿಸುವಿಕೆ, ನಿರ್ವಹಣೆ ಬಗ್ಗೆ ಕೆಲವು ಸ್ವಯಂ ಸೇವಕರನ್ನು ಒಳಗೊಂಡ ತಂಡವೊಂದನ್ನು ಸಮುದಾಯ ರೇಡಿಯೋವಿನ ಪರಿಕಲ್ಪನೆ ವಿಷದಪಡಿಸುವಿಕೆಯ ಬಗ್ಗೆ ಎರಡು ದಿನದ ಕಾರ್ಯಾಗಾರವನ್ನು ಆ ಸಮುದಾಯದ ಬೇಡಿಕೆಗಳಿಗೆ ತಕ್ಕಂತೆ ರೂಪಿಸಿಕೊಡುವುದಕ್ಕೆ ಸಹಾಯ ಮಾಡುತ್ತದೆ.

ಕಾರ್ಯಗಾರದ ಉದ್ದೇಶ

ಸಮುದಾಯ ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳನ್ನು, ಒಂದು ಗೊತ್ತಾದ ಸ್ಠಳದಲ್ಲಿ ವಿಶೇಷ ಲಕ್ಷಣಗಳನ್ನು ಹೊಂದಿರುವಂತಹ ಸಂಸ್ಕೃತಿಯಲ್ಲಿ ಅಥವಾ ನಿರ್ದಿಷ್ಟವಾದ ಪ್ರಸಂಗದಲ್ಲಿ, ಭಾರತ ಕೇಂದ್ರ ಸರ್ಕಾರವು ಅಗತ್ಯವೆಂದು ರೂಪಿಸಿರುವ ನಿಯಮಗಳಿಗೆ ಅನುಸಾರವಾಗಿ, ಒಂದೆಡೆ ಸೇರಿಸುವುದು.

ಸಂಘಟನಾ ತಂತ್ರ

ಸಮುದಾಯ ರೇಡಿಯೋವು ಆ ಸಮುದಾಯದ ಜೊತೆಗೆ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಯೊಂದಿಗೆ ಹೆಚ್ಚು ನಿಕಟ ಸಂಬಂಧವನ್ನು ಬೆಳೆಸಲು ಸಾಧ್ಯವಾಗಿಸುವುದರ ಜೊತೆಗೆ ಆ ಸಮುದಾಯದ ಹೆಚ್ಚು ಜನರನ್ನು ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತದೆ. ಇದೇ ಕಾರ್ಯಾಗಾರದ ಸಂಘಟನಾ ತಂತ್ರವಾಗಿದೆ.

ಈ ತಂತ್ರಕ್ಕೆ ನೆರವಾಗುವ ನಿಟ್ಟಿನಲ್ಲಿ ಕಾರ್ಯಗಾರ ಮಾಡುವ ಮತ್ತೊಂದು ಕೆಲಸವೆಂದರೆ ಒಂದು ಗೊತ್ತಾದ ಸ್ಠಳದಲ್ಲಿ ವಿಶೇಷ ಲಕ್ಷಣಗಳನ್ನು ಹೊಂದಿರುವಂತಹ ಸಂಸ್ಕೃತಿಯನ್ನು ಅಥವಾ ನಿರ್ದಿಷ್ಟವಾದ ಸನ್ನಿವೇಶವನ್ನು ರೂಪಿಸುವುದು ಅಥವಾ ಸೃಜಿಸುವುದು ಅಥವಾ ಸಮಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡುವುದು. ಇದರಿಂದಾಗಿ ಸ್ಥಳೀಯರ ಆಶಯಗಳಿಗೆ ಅನುಗುಣವಾಗಿ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುವಂತಹ ಒಂದು ಸಮುದಾಯ ರೇಡಿಯೋವನ್ನು ನಿರ್ಮಿಸಲು ಶ್ರಮಿಸುತ್ತಿರುವ ಪ್ರತಿಯೊಂದು ಸರ್ಕಾರೇತರ ಸಂಸ್ಥೆಗೆ ಸಹಾಯವಾಗುತ್ತದೆ.


ಕಾರ್ಯಾಗಾರದ ಉದ್ದೇಶ

 • ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಮುದಾಯ ರೇಡಿಯೋ ಕೇಂದ್ರ ಲಕ್ಷಣಗಳ ಪುನರ್ ಪರಿಶೀಲನೆ
 • ಕೆಲವು ಸಮುದಾಯ ರೇಡಿಯೋ ಕೇಂದ್ರಗಳನ್ನು ಉದಾಹರಣೆಗಳಾಗಿ ಅವಲೋಕಿಸುವುದು ಹಾಗೂ ಆ ಕೇಂದ್ರಗಳು ತಮ್ಮ ಇಂದಿನ ಸ್ಪಷ್ಟ ರೂಪತೆಯನ್ನು ಹೊಂದಲು ಬೆಳೆದು ಬಂದ ದಾರಿಯನ್ನು ಪರಿಶೀಲಿಸುವುದು
 • ಹೊಸ ಲಕ್ಷಣಗಳನ್ನು ಆಯಾಮಗಳನ್ನು ನಿರ್ಮಿಸುವುದು
 • ಕಾರ್ಯ ನಿರ್ವಹಿಸುತ್ತಿರುವ ಹಂತಗಳ ಮೌಲ್ಯ ಮಾಪನ ಹಾಗೂ ಮುಂದಿನ ಹಂತಗಳ ಬಗ್ಗೆ ಯೋಜನೆ

ಯಾರು ಅಭ್ಯರ್ಥಿಗಳಾಗಬಹುದು

ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸುವ ಅಭ್ಯರ್ಥಿಗಳನ್ನು ಗುರುತಿಸುವುದು ಕಷ್ಟ ಸಾಧ್ಯ. ಕಾರ್ಯಗಾರದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ರೇಡಿಯೋವಿನ ಲಕ್ಷಣಗಳು, ವೈಶಿಷ್ಟತೆಗಳನ್ನು ಹೇಳುವಂತವರಾಗಿರಬೇಕು ಹಾಗೂ ತಮ್ಮೊಂದಿಗೆ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಯೊಂದಿಗೆ ನಿಕಟ ಸಂಪರ್ಕದಲ್ಲಿರಬೇಕು. ಅಷ್ಟೆ ಅಲ್ಲದೆ ಈ ಅಭ್ಯರ್ಥಿಗಳು ತಮ್ಮ ಸಮುದಾಯದ ಸದಸ್ಯರುಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು ತನ್ಮೂಲಕ ಆ ಸಮುದಾಯದ ನಾಯಕತ್ವವನ್ನು ವಹಿಸುವಂತವರಾಗಬೇಕು ಮತ್ತು ತಮ್ಮ ಸಮುದಾಯದ ಜನರನ್ನು ದೂರಮಾಡದಂತೆ ಕೆಲಸ ಮಾಡುವಂತವರಾಗಬೇಕು. ಎಲ್ಲರಿಗೂ ವಿಶ್ವಾಸವನ್ನು ತೋರುವಂತಹ, ಒಳ ಹೊರಗಿನ ಕೆಲಸಗಳನ್ನು ಮಾಡುವಂತಹ, ಜವಾಬ್ದಾರಿಯನ್ನು ಹೊಂದಿರುವ, ಸಮುದಾಯ ರೇಡಿಯೋ ಕೇಂದ್ರಕ್ಕೆ ಸಮೀಪವರ್ತಿಯಾಗಿರುವ ಅಭ್ಯರ್ಥಿ ಕಾರ್ಯಗಾರದಲ್ಲಿ ಭಾಗವಸಿಸಬೇಕೆಂಬುದು ನಮ್ಮ ಅಪೇಕ್ಷೆ. ಕಾರ್ಯಗಾರದ ಈ ಆಹ್ವಾನ ಪತ್ರಿಕೆಯನ್ನು ಸಮುದಾಯ ರೇಡಿಯೋವೊಂದನ್ನು ಪ್ರಾರಂಭಿಸಲು ಇಚ್ಚೆಯಿರುವ, ಆದರೆ ,ಸಮುದಾಯ ರೇಡಿಯೋ ಎಂದರೇನು, ಅದರಿಂದಾಗುವ ಲಾಭಗಳೇನು, ಸ್ಥಾಪಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳೇನು ಎಂದು ತಿಳಿಯದ ಸಂಸ್ಥೆಗಳಿಗೆ ಕಳುಹಿಸಿಕೊಡಲಾಗುವುದು. ಬೇರೆ ಪದಗಳಲ್ಲಿ ಹೇಳುವುದಾದರೆ ಇವುಗಳು ಕಾರ್ಯರೂಪಕ್ಕೆ ಬರುವ ಸಾಮರ್ಥ್ಯವುಳ್ಳ ರೇಡಿಯೋ ಕೇಂದ್ರಗಳು! ಹಾಗಿದ್ದರೂ ಇದು ಮೊದಲ ಹೆಜ್ಜೆ ಮಾತ್ರವಾದ್ದರಿಂದ ಅದೇ ಅಭ್ಯರ್ಥಿಗಳ ಜೊತೆ, ಅವಿಚ್ಚಿನ್ನವಾಗಿ, ಸಮುದಾಯ ರೇಡಿಯೋ ವಿನ ಪರಿಕಲ್ಪನೆ ಯಾವುದೇ ತಡೆ ಇಲ್ಲದೆ ಸುಗಮವಾಗಿ ಅರ್ಥವಾಗಲು ಕಾರ್ಯಗಾರದ ಸರಣಿ ನಡೆಸುವುದು ಅಪೇಕ್ಷಣೀಯ.

ಎಷ್ಟು ಕಾಲ

ಈ ಕಾರ್ಯಗಾರವು ಸಾಮಾನ್ಯವಾಗಿ ಎರಡು ದಿನದ್ದಾಗಿರುತ್ತದೆ. ಈ ಎರಡು ದಿನದಲ್ಲಿ ಸಾಕಷ್ಟು ಪ್ರದರ್ಶನಗಳು, ಪ್ರತಿಪಾದನೆಗಳು, ಕಾರ್ಯಗಳು ಚರ್ಚೆಗಳು ಇರುತ್ತದೆ. ಸಂದರ್ಭಕ್ಕೆ ಅನುಸಾರವಾಗಿ ಈ ಕಾರ್ಯಗಾರದ ಸಮಯ ವಿಸ್ತಾರಗೊಳ್ಳಲೂ ಬಹುದು ಕಡಿತಗೊಳ್ಳಲೂ ಬಹುದು. ಆದರೂ ಎರಡು ದಿನದ ಕಾರ್ಯಗಾರ ಸೂಕ್ತ.

ಭಾಗವಹಿಸುವವರ ಪರಿಚಯ

 • ಕಲಾಪದ ಮುಂದಾಳು : ಮುಖ್ಯ ಆಯೋಜಕ
 • ಕಾಲಾವಧಿ :30 ನಿಮಿಷಗಳು
 • ಸಂಕಲ್ಪ : ಹೆಸರಿನ ಹೊರತಾಗಿ ಅಭ್ಯರ್ಥಿಗಳ ಪರಸ್ಪರ ಪರಿಚಯ, ಔಪಚಾರಿಕತೆ ಹಾಗೂ ಉದ್ವೇಗವನ್ನು ಮುರಿದು ತತಕ್ಷಣ ಕಾರ್ಯಗಾರದ ಕೆಲಸಗಳಲ್ಲಿ ಭಾಗವಹಿಸುವಂತೆ ಮಾಡುವುದು

ಚಟುವಟಿಕೆಗಳು

ಇಬ್ಬರು ಅಭ್ಯರ್ಥಿಗಳ ಒಂದು ತಂಡವನ್ನು ರಚಿಸಿ ಪರಸ್ಪರರ ಪರಿಚಯ ಮಾಡಿಕೊಳ್ಳುವಂತೆ ಕೇಳಲಾಗುವುದು. ಪರಿಚಯವು ಕೇವಲ ಮೇಲ್ಮಟ್ಟದ್ದಾಗದೆ ಆಮೂಲಾಗ್ರವಾಗಿ ಅಂದರೆ ಅವರ ಇಷ್ಟಾನಿಷ್ಟಗಳು, ಹವ್ಯಾಸಗಳು, ಅವರಲ್ಲಿರುವ ಪ್ರತಿಭೆ ಇತ್ಯಾದಿ ಇತ್ಯಾದಿ ಹೀಗೆ ಎಲ್ಲವನ್ನೂ ತಿಳಿದುಕೊಳ್ಳುವಂತಾಗಬೇಕು. ಅಲ್ಲದೇ ಅಭ್ಯರ್ಥಿಗಳು ತಮ್ಮ ಜೊತೆಗಾರರ ಕುರಿತು ಕುತೂಹಲಕರವಾದ ರೀತಿಯಲ್ಲಿ ಪರಿಚಯ ಮಾಡಿಕೊಡಬೇಕಾಗುವುದು. ಈ ರೀತಿಯಾಗಿ, ಅಭ್ಯರ್ಥಿಗಳು ರೇಡಿಯೋ ಸಂಬಂಧಿತ ವೃತ್ತಿಗಾರರಾಗುವುದರಿಂದ ತಮಗೆ ಬೇಕಾದ ಮಾಹಿತಿಯನ್ನು ಸಂಪೂರ್ಣವಾಗಿ ಸಂಗ್ರಹಿಸಬೇಕು ಮತ್ತು ಮುಖ್ಯವಾಗಿ ಅದನ್ನು ಹಾಸ್ಯಮಿಶ್ರಿತ ಸುಲಲಿತವಾದ ಶೈಲಿಯಲ್ಲಿ ಜನರ ಲಕ್ಷ್ಯ ಸೆಳೆಯುವಂತೆ ಹೇಳುವುದನ್ನೂ ಅಭ್ಯಸಿಸಬೇಕು

ಛಾಯಚಿತ್ರಗಳ ಮೂಲಕ ರೇಡಿಯೋ

 • ಕಲಾಪದ ಮುಂದಾಳು: ಮುಖ್ಯ ಆಯೋಜಕ
 • ಕಾಲಾವಧಿ : 30 ನಿಮಿಷಗಳು
 • ಸಂಕಲ್ಪ : ಅಭ್ಯರ್ಥಿಗಳು ರೇಡಿಯೋವಿನ ಹಲವು ಮಗ್ಗಲುಗಳನ್ನೂ ವೈವಿಧ್ಯತೆಗಳನ್ನು ಕುರಿತು ಆಲೋಚಿಸಬೇಕು ಹಾಗು ಮಾಧ್ಯಮಗಳ ನಕಾಶೆ ಹಾಗೂ ಸ್ವರೂಪದಲ್ಲಿ ಸಮುದಾಯ ರೇಡಿಯೋವನ್ನು ಗುರುತಿಸಲು ಪ್ರಾರಂಭಿಸಬೇಕು

ಚಟುವಟಿಕೆಗಳು

ಇಲ್ಲಿ ಅಭ್ಯರ್ಥಿಗಳಿಗೆ ರೇಡಿಯೋವಿನ ಪಯಣದ ಕುರಿತಾದ ಒಂದು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಇರುವುದು.ನಮ್ಮ ಪ್ರಕರಣದಲ್ಲಿ ನಾವು ಆಲ್ ಇಂಡಿಯ ರೇಡಿಯೋ, ಸಾರ್ವಜನಿಕ ನಿಸ್ತಂತು ವಾರ್ತಾ ಪ್ರಸರಣ, ನೆಲಸುವಾಡಿನ ಪರಿಧಿಯಲ್ಲಿ ಅದು ಶುರುವಾದ ಬಗೆ -ಇವುಗಳ ಛಾಯಾಚಿತ್ರವನ್ನು ತೋರಿಸಿ ಕಾರ್ಯಗಾರ ಶುರು ಮಾಡುತ್ತೇವೆ.ಸಾರ್ವಜನಿಕ ರೇಡಿಯೋ ಮುಖ್ಯವಾಗಿ ಸರ್ಕಾರದ ಬಗ್ಗೆ ಮಾಹಿತಿಗಳನ್ನು ಎಲ್ಲಾ ಕಡೆ ಪ್ರಸಾರ ಮಾಡುವುದಕ್ಕೆ ಉಪಯೋಗವಾಗುತ್ತಿತ್ತು. ಈ ಸಂಪ್ರದಾಯ ಭಾರತ ಸ್ವತಂತ್ರವಾದ ನಂತರವೂ ಮುಂದುವರೆದುಕೊಂಡು ಬಂದಿತು. ಆಲ್ ಇಂಡಿಯ ರೇಡಿಯೋ 1997ರಲ್ಲಿ ಸ್ವಾಯತ್ತತೆಯನ್ನು ಪಡೆದ ನಂತರವೂ ಅದರ ಸ್ವರೂಪ ಹಾಗೂ ಕಾರ್ಯ ರೀತಿ ಸ್ವಲ್ಪವೂ ಬದಲಾವಣೆಯನ್ನು ಕಂಡಿರಲಿಲ್ಲ. ನಂತರ BBC ಯ ಸ್ಪೂರ್ತಿಯಿಂದ 1990 ರಲ್ಲಿ ನಿರ್ಮಾಣವಾಗಿದ್ದ ,ಸ್ವತಂತ್ರ ಪ್ರಸಾರ ಕಾಯವಾದ ಪ್ರಸಾರ ಭಾರತಿ ಯ ಅಧೀನವಾಯಿತು. ಇದರ ನಂತರ ಭಾರತದ ಆರ್ಥಿಕ ಔದಾರ್ಯದ ಪಯಣದಲ್ಲಿ ಭಾರತವು ಬೇರೆ ಸಾಕಷ್ಟು ವಿಷಯಗಳೊಂದಿಗೆ ಎಫ್.ಎಂ. ರೇಡಿಯೋ ವಿಭಾಗಕ್ಕೂ ತನ್ನನ್ನು ತೆರೆದುಕೊಂಡಿತು.ಇದಾದ ಕೆಲವೇ ವರ್ಷಗಳಲ್ಲಿ ಭಾರತ ಸರ್ಕಾರವು ವಿವಿಧ ಪ್ರೀಕ್ವೆನ್ಸಿ ಗಳನ್ನು ಹರಾಜಿಗಿಟ್ಟಿತು. ಇದನ್ನು ಖರಿದೀಸಿದ ವ್ಯಾವಹಾರಿಕ ಕಂಪನಿಗಳು, ತಮ್ಮ ಖರೀದಿ ದರ ಅಥವಾ ಅದಕ್ಕಿಂತ ಹೆಚ್ಚು ಮೊತ್ತವನ್ನು ಶುಲ್ಕವಾಗಿ ಕಟ್ಟಬೇಕಾಗಿ ಬಂತು. ಈ ಶುಲ್ಕವು ವಾರ್ಷಿಕ 15% ರ ರೀತಿಯಲ್ಲಿ ಹೆಚ್ಚಾಗುತಲಿತ್ತು. ಆದರೆ ಕೆಲವೇ ದಿನಗಳಲ್ಲಿ ಇಷ್ಟು ದುಬಾರಿ ಮೊತ್ತವನ್ನು ಭರಿಸಲಾಗದ ಕೆಲವು ಖಾಸಗಿ ಕಂಪನಿಗಳು ದಿವಾಳಿಯೆದ್ದವು. ಇಂದು ಭಾರತ ಸರ್ಕಾರವು ಫ್ರಿಕ್ವೆನ್ಸಿ ಹರಾಜಿಗೆ ಅದೇ ನಿಯಮವನ್ನು ಪಾಲಿಸುತ್ತಿದ್ದರೂ ವಾರ್ಷಿಕ ಶುಲ್ಕವು ಕಂಪನಿಯ ವರ್ಷದ ಆದಾಯ ಹಾಗೂ ಲಾಭದ ಮೇಲೆ ಅವಲಂಬಿತವಾಗಿದೆ. ರೇಡಿಯೋವಿನ ಈ ಮಾದರಿ ಪ್ರಸ್ತುತ ಮಾರುಕಟ್ಟೆಯ 3% ರಷ್ಟು ಆಕ್ರಮಿಸಿದೆ ಹಾಗೂ ತನ್ನ ಕಾರ್ಯಕ್ಕೆ ಲಾಭಕ್ಕೆ ಜಾಹೀರಾತುಗಳನ್ನೇ ನೆಚ್ಚಿಕೊಂಡಿದೆ. ಏಕೆಂದರೆ ರೇಡಿಯೋ ಒಂದು ಮುಕ್ತ ಔದ್ಯೋಗಿಕ ವಿಜ್ಙಾನವಾಗಿದ್ದು ಕೇಳುಗರನ್ನು ಕಾರ್ಯಮವನ್ನು ಆಲಿಸಿದ್ದಾಕ್ಕಾಗಿ ಶುಲ್ಕ ವಿಧಿಸುವಂತಿಲ್ಲ. ಭಾರತದಲ್ಲಿ ರಿಲಯನ್ಸ್ ನಂತಹ ಸಂಸ್ಥೆ ರೇಡಿಯೋ ಬಿಗ್ FM ಮೇಲೆ ಬೃಹತ್ ಪ್ರಮಾಣದ ಹಣವನ್ನು ವಿನಿಯೋಗಿಸಿದೆ.

ನಂತರ ನಾವು ಈ ಎರಡು ರೀತಿಯ ರೇಡಿಯೋ ಕೇಂದ್ರಗಳಲ್ಲಿ ಪ್ರಸಾರವಾಗುವ ಮಾಹಿತಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ.
Radio.jpg
ಅದಲ್ಲದೆ ಈ ಎರಡರಲ್ಲಿ ಒಂದನ್ನಾರಿಸಿಕೊಂಡ ಅಭ್ಯರ್ಥಿಗಳ ಅನುಭವವನ್ನೂ ಚರ್ಚಿಸುತ್ತೇವೆ. ಈ ಪರಿಚಯದ ನಂತರ ಸಮುದಾಯ ರೇಡಿಯೋವಿನ ಆರಂಭಿಕ ಶಕ್ತಿಗಳಾದ ನಮ್ಮ ಧ್ವನಿ,DDS,KMVS ಇನ್ನು ಮುಂತಾದ ಸಮುದಾಯ ರೇಡಿಯೋ ಕೇಂದ್ರಗಳ ಛಾಯಾ ಚಿತ್ರಗಳನ್ನು ತೋರಿಸುತ್ತೇವೆ.

2004 ರಲ್ಲಿ ಭಾರತ ಸರ್ಕಾರವು ಸಮುದಾಯ ರೇಡಿಯೋ ಕೇಂದ್ರಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಮೀಸಲಿಟ್ಟಿತ್ತು. ಈ ಕೇಂದ್ರಗಳ ನಿರ್ವಾಹಕರು ಶಿಕ್ಷಣ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡವರಾಗಿದ್ದರು ಮತ್ತು ಇದರಲ್ಲಿನ ಕಾರ್ಯಕ್ರಮಗಳು ಕೇವಲ ಶೈಕ್ಷಣಿಕವಾಗಿದ್ದವು. 2006 ರಲ್ಲಿ ಭಾರತ ಸರ್ಕಾರವು ಸಮುದಾಯ ರೇಡಿಯೋ ಕೇಂದ್ರವನ್ನು ಲಾಭ ರಹಿತ ಸಂಸ್ಥೆಗಳಿಗೆ ತೆರೆಯಿತು. ಮೇಲೆ ಹೇಳಿದ ಪೀಠಿಕೆ ಹಾಗೂ ಆರಂಭಿಕ ಶಕ್ತಿಗಳ ಉದಾಹರಣೆಯೊಂದಿಗೆ ನಾವು ಸಮುದಾಯ ಆಧಾರಿತ ಕಾರ್ಯಕ್ರಮಗಳ ಬಗ್ಗೆ, ನಿರ್ವಹಣೆ ಹಾಗೂ ಒಡೆತನದ ಬಗ್ಗೆ, ಅನಿಸಿಕೆ, ಸಂಸರ್ಗದ ಬೆಳವಣಿಗೆ, ಪ್ರತ್ಯಾದಾನ ಇನ್ನಿತರ ಪರಿಕಲ್ಪನೆಗಳ ಬಗೆಗೆ ಒಂದು ಪ್ರಾತ್ಯಕ್ಷಿಕೆಯನ್ನು ನೀಡುತ್ತೇವೆ. ಇದಾದ ನಂತರ ಸಮುದಾಯ ರೇಡಿಯೋ ಗೆ ಸಂಬಂಧಪಟ್ಟ ಮುಖ್ಯ ವಿಷಯಗಳಾದ ನಿರ್ವಹಣೆ, ಅದರ ಸಾಮರ್ಥ್ಯ ಇನ್ನೂ ಮುಂತಾದ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಈ ಸಭೆಯ ಕೊನೆಯ ಕಾರ್ಯಕ್ರಮವೆಂದರೆ ಪರಸ್ಪರ ಪ್ರಭಾವ ಬೀರುವಂತಹ ಚರ್ಚೆ.ಇಲ್ಲಿ ಅಭ್ಯರ್ಥಿಗಳು ಪ್ರಶ್ನೆಗಳನ್ನು ತಮಗಿರುವ ಅನುಮಾನವನ್ನೂ ಬಗೆಹರಿಸಿಕೊಳ್ಳಬಹುದು.

ವಿ.ಸೂ : ನಿಮಗೆ ಈ ಪ್ರಾತ್ಯಕ್ಷಿಕೆಯ ಒಂದು ಪ್ರತಿ ಬೇಕಾದಲ್ಲಿ info at maraa dot in ಗೆ ಒಂದು ಮಿಂಚಂಚೆಯನ್ನು ಕಳುಹಿಸಿ.

ಸಮುದಾಯ ರೇಡಿಯೋ ನಿಯಮಗಳು

 • ಸಭೆಯ ಅಧ್ಯಕ್ಷತೆ :
 • ಕಾಲಾವಧಿ : 45 ನಿಮಿಷಗಳು
 • ಉದ್ದೇಶ : ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸರಣ ಸಚಿವಾಲಯ ಸಮುದಾಯ ರೇಡಿಯೋ ಗೆ ಸಂಬಂಧಪಟ್ಟ ರೂಪಿಸಿರುವ ನಿಯಮಗಳ ಸರಿಯಾದ ಅರ್ಥೈಸುವಿಕೆ

ಚಟುವಟಿಕೆಗಳು

ಈ ನೇರ ಚರ್ಚೆಯಲ್ಲಿ ನಾವು ಅಭ್ಯರ್ಥಿಗಳಿಗೆ ನವೆಂಬರ್ 16, 2006ರಂದು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸರಣ ಸಚಿವಾಲಯ ಆದೇಶ ಹೊರಡಿಸಿರುವ ನಿಯಮಗಳ ಪರಿಚಯ ಮಾಡಿಕೊಡುತ್ತೇವೆ. ಸಮುದಾಯ ಪ್ರಸರಣದ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಲು ಸೂಕ್ತ ಅಭ್ಯರ್ಥಿಗಳು ಯಾರೆಂಬುದನ್ನು ಇಲ್ಲಿ ತಿಳಿಸಿಕೊಡುತ್ತೇವೆ. ಬಹುಶಃ ಈ ಅಭ್ಯರ್ಥಿಗಳು ಲಾಭ ರಹಿತ ವಿಭಾಗದಲ್ಲಿ ಬರುತ್ತಾರೆ. ಈ ವಿಭಾಗದ ತಾಂತ್ರಿಕ ಪರಿಗಣನೆ-ಗರಿಷ್ಟ 100 ವಾಟ್ ಇ ಆರ್ ಪಿ(ERP: Effective Radiated Power)ಗಳಾಗಿರಬೇಕು ಹಾಗೂ ಗೋಪುರದ ಮಿತಿ (ಎತ್ತರ) 15 ಅಡಿಗಳಿಂದ 30 ಅಡಿಗಳಾಗಿರಬೇಕು. ಈ ವಿಭಾಗದ ಮುಂದಿನ ಹಂತವೆಂದರೆ ನಿಯಮಗಳಿಗೆ ಅನುಸಾರವಾಗಿ ಎಂತಹ ಕಾರ್ಯಕ್ರಮಗಳನ್ನು ಪ್ರಸರಿಸುವಂತಿಲ್ಲ ಎಂಬುದಾಗಿದೆ. ನಿಯಮಗಳಿಗೆ ಅನುಸಾರವಾಗಿ ವಾರ್ತೆ, ಪ್ರಚಲಿತ ಸುದ್ಧಿಗಳು, ರಾಜಕೀಯ ಪ್ರೇರಿತ ಕಾರ್ಯಕ್ರಮ ಧರ್ಮಾಧಾರಿತ ಕಾರ್ಯಕ್ರಮಗಳು, ಹಗೆ ಭಾಷಣ, ಸಂದರ್ಭಕ್ಕೆ ತಕ್ಕಂತೆ ವ್ಯತ್ಯಾಸಗೊಳ್ಳುವ ಮಹಿಳೆ ಮಕ್ಕಳು ನ್ಯಾಯಾಂಗದ ಕುರಿತಾದ ಕಾರ್ಯಕ್ರಮಗಳನ್ನು ಪ್ರಸರಿಸುವಂತಿಲ್ಲ. ಇಷ್ಟೇ ಅಲ್ಲದೆ ಆದಾಯ ಹೆಚ್ಚಿಸುವಂತಹ ತಂತ್ರಗಾರಿಕೆಗಳು ಹೇಳಿಕೊಡುತ್ತೇವೆ. ಅಂದರೆ ಪ್ರತಿ ಘಂಟೆಗೆ 5 ನಿಮಿಷಗಳ ಕಾಲ ಜಾಹೀರಾತಿನ ಪ್ರಸರಣಕ್ಕೆ ಸಮಯ ನಿಗದಿಪಡಿಸಿಕೊಳ್ಳಬಹುದು. ಜಾಹಿರಾತಿನ ಸಂಹಿತೆ ಆಲ್ ಇಂಡಿಯಾ ರೇಡಿಯೋವಿನ ಜಾಹಿರಾತಿನ ಸಂಹಿತೆಗೆ ಹೊಂದಿಕೆಯಾಗುವಂತಿರಬೇಕು. ಇದಲ್ಲದೆ ಸಚಿವಾಲಯದ ಆದೇಶವು ಸಮುದಾಯ ರೇಡಿಯೋ ಸ್ಥಾಪನೆಯ ಉದ್ದೇಶವನ್ನು ಕೂಡ ಸ್ಪಷ್ಟೀಕರಿಸುತ್ತದೆ. ಇದರ ಹಿಂದಿರುವ ಉದ್ದೇಶಗಳೆಂದರೆ ಸಮುದಾಯದ ಶೈಕ್ಷಣಿಕ, ಅಭಿವೃದ್ಧಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಬೇಡಿಕೆಗಳನ್ನು ನಿವೇದಿಸುವುದು. ರೇಡಿಯೋದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಸಮುದಾಯ ರೇಡಿಯೋ ಕೇಂದ್ರ ಸ್ಥಾಪನೆಯಾಗಿರುವ ಪ್ರದೇಶದ ಭಾಷೆಯಲ್ಲಿರಬೇಕು. ನಿಯಮಗಳ ಪೂರ್ಣ ಪಾಠವನ್ನು ಇಲ್ಲಿ ಕೊಡಲಾಗಿದೆ.

ನಿಮ್ಮ ರೇಡಿಯೋ ವ್ಯಾಖ್ಯಾನಿಸಿ

 • ಕಲಾಪದ ಮುಂದಾಳು :ಅಭ್ಯರ್ಥಿ
 • ಕಾಲಾವಧಿ : ಗರಿಷ್ಟ 60 ನಿಮಿಷಗಳು
 • ಉದ್ದೇಶ : ಸಮುದಾಯ ರೇಡಿಯೋ ದ ಬಗ್ಗೆ ಅಭ್ಯರ್ಥಿಗಳಿಂದ ಪದಗಳ ಸಹಾಯವಿಲ್ಲದೆ ಅವರ ಆರಂಭಿಕ ಸ್ಥೂಲ ಅಭಿಪ್ರಾಯವನ್ನು ಸಂಗ್ರಹಿಸಿ ಅದರಲ್ಲಿ ಉತ್ಕೃಷ್ಟ ಅಭಿಪ್ರಾಯಗಳನ್ನು ಸಂಗ್ರಹಿಸುವುದು.

ಚಟುವಟಿಕೆಗಳು

Kumaunvani groupwork.JPG
ಸಮುದಾಯ ರೇಡಿಯೋ ಬಗೆಗಿನ ಪ್ರದರ್ಶನ ಪ್ರಾತ್ಯಕ್ಷಿಕೆಯನ್ನು ಸಂಪೂರ್ಣವಾಗಿ ತಿಳಿದ ನಂತರ ನಾವು ಅಭ್ಯರ್ಥಿಗಳನ್ನು ಹಲವು ಗುಂಪುಗಳನ್ನಾಗಿ ವಿಂಗಡಿಸಿ ಪ್ರತಿಯೊಂದು ಗುಂಪಿಗೂ ಲೇಖನಿ ಮತ್ತು ಕಾಗದಗಳನ್ನು ನೀಡುತ್ತೇವೆ. ನಂತರ ಪ್ರತಿಯೊಂದು ಗುಂಪಿಗೂ ಅವರ ಹಳ್ಳಿಯ, ಅವರ ಸಮುದಾಯದ ಜನರ ಪರಿಧಿಯಲ್ಲಿ ಬರುವ ಹಾಗೆ ಸಮುದಾಯ ರೇಡಿಯೋ ಬಗ್ಗೆ ತಮ್ಮದೇ ಆದ ವ್ಯಾಖ್ಯಾನವನ್ನು ರೂಪಿಸಲು ಹೇಳುತ್ತೇವೆ. ಬರವಣಿಗೆಯ ರೂಪದಲ್ಲಿದ್ದರೆ ಒಬ್ಬರಿಂದೊಬ್ಬರು ನಕಲು ಮಾಡುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳು ತಮ್ಮ ಸಮುದಾಯ ರೇಡಿಯೋ ಕಲ್ಪನೆಯನ್ನು ಚಿತ್ರಗಳ ಮೂಲಕ ಅಥವಾ ದೃಷ್ಟಾಂತಗಳಿಂದ ವ್ಯಕ್ತಪಡಿಸಬೇಕು ಎಂಬ ಷರತ್ತಿನೊಂದಿಗೆ ಅಭ್ಯರ್ಥಿಗಳನ್ನು ವೇದಿಕೆಗೆ ಆಹ್ವಾನಿಸಲಾಗುತ್ತದೆ. ಇವರು ಸಕಾರಣದೊಂದಿಗೆ ತಮ್ಮ ಕಲ್ಪನೆಯನ್ನು ವಿವರಿಸಬೇಕಾಗುತ್ತದೆ. ಇದರಿಂದ ಬರುವ ಫಲಿತಾಂಶ ನಿಜಕ್ಕೂ ಆಶ್ಚರ್ಯಕರ!!
Bundelkhand local definition.JPG
ಎಷ್ಟೋ ಬಾರಿ ಇವು ಮಹತ್ತರವಾಗಿರುತ್ತದೆ ಹಾಗೂ ತೃಪ್ತಿದಾಯಕ ಕೂಡ. ಎಲ್ಲಾ ತಂಡಗಳ ಸರದಿ ಮುಗಿದ ನಂತರ ಎಲ್ಲ ಅಭ್ಯರ್ಥಿಗಳು ಕೂಡಿ ತಮ್ಮ ಸಮುದಾಯ ರೇಡಿಯೋವಿನ ಲಕ್ಷಣಗಳನ್ನು ಬರೆಯುವಂತೆ ಹೇಳಲಾಗುತ್ತದೆ. ಇದು 3 ವಾಕ್ಯಗಳನ್ನು ಮೀರಬಾರದು ಹಾಗೂ ಎಲ್ಲ ತಂಡಗಳ ದೃಷ್ಟಾಂತಗಳನ್ನು ಹಾಗೂ ಮನೋಭಾವನೆಯನ್ನು ಹೊಂದಿರಬೇಕು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ.

ಸಮುದಾಯ ರೇಡಿಯೋವಿನ ಪಾತ್ರ

 • ಕಲಾಪದ ಮುಂದಾಳು :ಅಭ್ಯರ್ಥಿ
 • ಕಾಲಾವಧಿ : ಗರಿಷ್ಟ 60 ನಿಮಿಷಗಳು
 • ಉದ್ದೇಶ : ದಿನಂಪ್ರತಿ ಅನುಷ್ಠಾನದಲ್ಲಿ ಸಮುದಾಯ ರೇಡಿಯೋ ಎದುರಿಸುವ ತೊಂದರೆಗಳು ಹಾಗು ವಾಸ್ತವಿಕ ನೆಲೆಗಟ್ಟಿನಲ್ಲಿ ವ್ಯವಹರಿಸಬೇಕಾದ ರೀತಿಯ ಬಗ್ಗೆ, ಭಾವನ ರೂಪದಲ್ಲಿ ಮಾತ್ರ ಅಂದರೆ ಹಿಂದಿನ ಸಭೆಯಲ್ಲಿ ಮಾಡಿದಕ್ಕಿಂತ ವಿರುದ್ಧವಾಗಿ ಅಭ್ಯರ್ಥಿಗಳನ್ನು ಆಲೋಚಿಸುವಂತೆ ಮಾಡಲಾಗುತ್ತದೆ

ಚಟುವಟಿಕೆಗಳು

ಇದು ಅತ್ಯಂತ ಕುತೂಹಲಕಾರಿ ಘಟ್ಟ. ಸ್ಥಳೀಯ ಮಾಧ್ಯಮ ವಾಹಿನಿಯೊಂದು ಸ್ಥಳೀಯ ಪ್ರಸಂಗಗಳ ಬಗ್ಗೆ ಸಂದರ್ಭಗಳ ಬಗ್ಗೆ ಅತ್ಯಂತ ಜಾಗರೂಕತೆಯಿಂದಿದ್ದು ನಾಜೂಕಾಗಿ ವರ್ತಿಸಬೇಕಾಗುತ್ತದೆ. ಈ ಹೊತ್ತಿಗೆ ಕಾರ್ಯಗಾರದ ಅಭ್ಯರ್ಥಿಗಳಿಗೆ ಸ.ರೇ. ಮಾಹಿತಿಯನ್ನು ರವಾನಿಸುವುದಕ್ಕೆ ಇರುವ ಒಂದು ಮಾಧ್ಯಮ ಎಂಬುದು ಮನದಟ್ಟಾಗಿರುತ್ತದೆ. ಆದರೆ ನಾವು ಅದನ್ನು ಇಷ್ಟು ಸುಲಭವಾಗಲು ಬಿಡದೆ ಕೆಲವು ಕ್ಲಿಷ್ಟ ಪ್ರಸಂಗಗಳನ್ನು ಅಭ್ಯರ್ಥಿಗಳ ಮುಂದಿಟ್ಟು ಅದನ್ನು ಪರಿಹರಿಸಲು ಕೇಳುತ್ತೇವೆ. ಮತ್ತೊಮ್ಮೆ ಅಭ್ಯರ್ಥಿಗಳನ್ನು ತಂಡಗಳಾಗಿ ವಿಭಜಿಸಲಾಗುತ್ತದೆ. ಪ್ರತಿಯೊಂದು ತಂಡಕ್ಕೂ ಸ್ಥಳೀಯ ಪ್ರಸಂಗವೊಂದನ್ನು ನೀಡಲಾಗುತ್ತದೆ. ತಂಡವು ತಮಗೆ ಕೊಟ್ಟ ಪ್ರಸಂಗವನ್ನು ಅಭಿನಯಿಸಿ ತೋರಿಸಬೇಕಾಗುತ್ತದೆ. ಇಲ್ಲಿ ಅವರು ಯಾವುದೇ ಉತ್ತರವನ್ನಾಗಲೀ ಪರಿಹಾರವನ್ನಾಗಲಿ ಕೊಡಬೇಕಾಗಿಲ್ಲ. ಕೇವಲ ಆ ಸಂದರ್ಭವನ್ನು ಅಭಿನಯಿಸಿದರೆ ಸಾಕು. ಒಂದು ತಂಡ ಅಭಿನಯಿಸುವಾಗ ಉಳಿದೆಲ್ಲ ತಂಡಗಳು ತಾವು ಸ.ರೇ ನ ಮುಖ್ಯಸ್ಥರಾಗಿದ್ದರೆ ಯಾವ ರೀತಿಯ ತೀರ್ಪನ್ನು ಕೊಡಬೇಕು ಎಂಬುದಾಗಿ ಆಲೋಚಿಸಬೇಕು.ಅಂದರೆ ಉಳಿದ ತಂಡಗಳು ಕೆಲಸ ಮಾಡುತ್ತಿರುವ ವರದಿಗಾರರಂತೆ ಭಾವಿಸಿ 3ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

 • ತಾವು ಕಂಡ ಸನ್ನಿವೇಶಕ್ಕೆ ಅವರು ಸ.ರೇ ಮೂಲಕ ಪ್ರತಿಕ್ರಿಯಿಸುತ್ತಾರಾ? ಹೌದಾದಲ್ಲಿ ಕಾರಣವೇನು? ಇಲ್ಲವೆಂದಲ್ಲಿ ಕಾರಣವೇನು??
 • ಅವರ ಪ್ರತಿಕ್ರಿಯೆ ಹೇಗಿರುತ್ತದೆ?
 • ಪ್ರತಿಕ್ರಿಯೆ ಯ ಕಾರಣವೇನು?
Bundelkhand role radio.JPG

ಎಲ್ಲ ತಂಡಗಳು ಅಭಿನಯಿಸಿ ಆದಮೇಲೆ,ಎಲ್ಲ ತಂಡಗಳು ಉತ್ತರಿಸಿ ಆದಮೇಲೆ ಅಭಿನಯಿಸಲಾದಂತಹ ಸಂದರ್ಭಗಳನ್ನು, ಅದಕ್ಕೆ ದೊರಕಿದ ಪರಿಹಾರಗಳನ್ನು ಚರ್ಚಿಸಲಾಗುತ್ತದೆ. ಮಾಧ್ಯಮಗಳ ಮುಂದಿರುವ ಸವಾಲುಗಳು ತೊಂದರೆಗಳು ಇಲ್ಲಿ ವ್ಯಕ್ತವಾಗುತ್ತದೆ. ಕೆಲವು ಬಾರಿ ಸಮುದಾಯ ರೇಡಿಯೋ ಕೇಂದ್ರಗಳು ಜನರಲ್ಲಿ ಅರಿವನ್ನುಂಟು ಮಾಡಬೇಕಾದ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಇನ್ನೂ ಕೆಲಸು ಸಲ ತಟಸ್ಥ ಧೋರಣೆಯನ್ನು ಅನುಸರಿಸಬೇಕಾಗುತ್ತದೆ. ಮತ್ತೂ ಕೆಲವು ಬಾರಿ ಸ್ಠಳಿಯ ಜಗಳಗಳ ರಾಜೀ ಪಂಚಾಯ್ತಿಕೆಯನ್ನೂ ಮಾಡಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅಭ್ಯರ್ಥಿಗಳು ಸಾಮಾನ್ಯವಾಗಿ ರೇ. ನಾಟಕದ ಮೂಲಕ ಅಥವಾ ತಜ್ಙರೊಂದಿಗೆ ಸಂದರ್ಶನದ ಮೂಲಕ ಪರಿಹಾರವನ್ನು ಪಡೆದುಕೊಳ್ಳುತ್ತೇವೆ ಎನ್ನುತ್ತಾರೆ!! ಕಲಾಪದ ಮುಂದಾಳು

ರೇಡಿಯೋ ಕ್ರಮವ್ಯವಸ್ಥೆ

 • ಕಲಾಪದ ಮುಂದಾಳು :ಅಭ್ಯರ್ಥಿ
 • ಕಾಲಾವಧಿ : ಗರಿಷ್ಟ 60 ನಿಮಿಷಗಳು
 • ಉದ್ದೇಶ : ಸಮುದಾಯ ರೇಡಿಯೋ ಕೇಂದ್ರವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಇರಿಸಿ, ಅದನ್ನು ಹೇಗೆ ಬೇರೆ ಬೇರೆ ಸಂದರ್ಭಗಳಿಗೆ, ಧ್ಯೇಯಗಳಿಗೆ ಬಳಸಿಕೊಳ್ಳಬಹುದೆಂಬ ಯೋಜನಯನ್ನು ರೂಪಿಸುವುದು

ಚಟುವಟಿಕೆಗಳು

ಇಲ್ಲಿ ಅಭ್ಯರ್ಥಿಗಳಿಗೆ ತಮ್ಮ ಆಲೋಚನೆಗಳನ್ನು, ಅನಿಸಿಕೆಗಳನ್ನು ವಿಭಿನ್ನ ರೀತಿಗಳಲ್ಲಿ ವ್ಯಕ್ತಪಡಿಸುವುದನ್ನು ಹೇಳಿಕೊಡಲಾಗುತ್ತದೆ. ಅಭ್ಯರ್ಥಿಗಳು ರೇಡಿಯೋ ಕ್ರಮವ್ಯವಸ್ಥೆ ಹೇಗಿರಬೇಕು ಎಂಬುದನ್ನು ಒಂದು ಪಟ್ಟಿ ಮಾಡಿ ಅದನ್ನು ಉದಾಹರಣೆ ಸಹಿತವಾಗಿ ವಿವರಿಸುತ್ತಾರೆ. ಸಾಧಾರಣವಾಗಿ ಪಟ್ಟಿ ಮಾಡಬಹುದಾದ ಕ್ರಮವ್ಯವಸ್ಥೆಗಳು:

DSC02974.JPG
 • ಇಬ್ಬರ ನಡುವಿನ ಸಂದರ್ಶನ-ಪ್ರಶ್ನೆಗಳು ಚುಟುಕಾಗಿರಬೇಕು, ಅಸಂಬದ್ದ್ಧ ಉತ್ತರಗಳನ್ನ ಸಾಧ್ಯವಾದಷ್ಟು ತಪ್ಪಿಸಬೇಕು ಹಾಗೂ ಅಪ್ರಸ್ತುತ ಪ್ರಶ್ನೆಗಳನ್ನು ಕೇಳಬಾರದು. ಸಂದರ್ಶನ ಸಮಯ ಮೊದಲೇ ನಿಹಿತಗೊಂಡಿರಬೇಕು. ಉತ್ತರಗಳನ್ನು ಸಿದ್ಧಪಡಿಸಲು ಸಮಯವಕಾಶ ಇರಬೇಕು. ಸಂದರ್ಶಕರ ಕ್ಲುಪ್ತ ಪರಿಚಯ ಹಾಗೂ ಸಂದರ್ಶನದ ವಿಷಯ ಹಾಗೂ ಕಾರಣಗಳು ಇಷ್ಟನ್ನೂ ವಿಷದ ಪಡಿಸಬೇಕು. ಕಾಲಾವಧಿ 10 ರಿಂದ 15 ನಿಮಿಷಗಳನ್ನು ಮೀರಬಾರದು.
 • ಚರ್ಚೆ- 3 ಜನರನ್ನು ಒಳಗೊಂಡಿರಬೇಕು. ಒಬ್ಬರು ಮಧ್ಯಸ್ಥಗಾರರಾಗಿ ಕಾರ್ಯನಿರ್ವಹಿಸಿದರೆ, ಇನ್ನಿಬ್ಬರು ಪರ ವಿರೋಧಗಳಲ್ಲಿ ಒಂದೊಂದನ್ನು ಪ್ರತಿನಿಧಿಸಬೇಕು. ವಿವಾದಗಳನ್ನು ಹುಟ್ಟುಹಾಕುವುದಕ್ಕೋಸ್ಕರ ಇದನ್ನು ನಡೆಸದೆ ಪ್ರಸ್ತುತ ವಿಷಯದ ಸತ್ಯಾಸತ್ಯತೆಯನ್ನು ಜನತೆಗೆ ತಿಳಿಸುವುದಕ್ಕೋಸ್ಕರ ಮಾತ್ರ ಆಗಿರಬೇಕು. ಸಂಪನ್ಮೂಲ ವ್ಯಕ್ತಿಗಳನ್ನು ಮಾತ್ರವೇ ಕರೆಸಬೇಕು. ಕಾಲಾವಧಿ 10-15 ನಿಮಿಷಗಳನ್ನು ಮೀರಬಾರದು.
 • ಗುಂಪು ಚರ್ಚೆ: ವಿಭಿನ್ನ ದೃಷ್ಟಿಕೋನ ಉಳ್ಳ 4 ರಿಂದ 5 ಜನ ಪ್ರಸ್ತುತ ವಿಷಯದ ಬಗ್ಗೆ ಮಾತನಾಡಬೇಕು. ಚರ್ಚೆ ಕುತೂಹಲಕಾರಿಯಾಗಬೇಕೆಂಬುದೆ ಮುಖ್ಯ ಉದ್ದೇಶವಾದ್ದರಿಂದ ಒಬ್ಬರು ಇನ್ನೊಬ್ಬರಿಗೆ ವಿರುದ್ಧವಾದ ನಿಲುವುಗಳನ್ನು ಹೊಂದಿರಲೇ ಬೇಕಿಲ್ಲ. ಮಧ್ಯಸ್ಥಗಾರನ ಕೆಲಸ ಇಲ್ಲಿ ಶ್ರಮದಾಯಕ. ಚರ್ಚೆಗಳನ್ನು ತೀರ ಉದ್ದ ಎಳೆಯದಂತೆ ಹಾಗೂ ತೀರ ಪೇಲವವಾಗದಂತೆ ನೋಡಿಕೊಳ್ಳುವುದು ಮಧ್ಯಸ್ಥಗಾರನ ಜವಾಬ್ದಾರಿ. ಕಾಲಾವಧಿ 15-20 ನಿಮಿಷಗಳನ್ನು ಮೀರಬಾರದು
 • ವರದಿ: ವೈಲಕ್ಷಣ್ಯದಿಂದ ಕೂಡಿದ್ದರೂ ಘಟನಾವಲಂಬಿ ಚಿತ್ರಣ ಅಗತ್ಯ. ರಸ್ತೆ ಅಪಘಾತದ ಪ್ರಕರಣ ಕೈಗೆತ್ತಿಕೊಂಡು ರಸ್ತೆಯ ಸ್ಥಿತಿಗತಿಯ ಬಗ್ಗೆ ಹೇಳಬಯಸುವಿರಾದರೆ, ಆ ವರ್ಷದಲ್ಲಿ ಆ ರಸ್ತೆಯಲ್ಲಿ ಎಷ್ಟು ಅಪಘಾತಗಳು ನಡೆದವು ಎಂಬುದನ್ನು ವಿವರಿಸಬಲ್ಲಿರಾದರೆ ಆಗ ಅದು ಒಂದು ಸಂಪೂರ್ಣ ವರದಿ ಎನಿಸಿಕೊಳ್ಳುತ್ತದೆ. ಕಾಲಾವಧಿ 15 ನಿಮಿಷಗಳನ್ನು ಮೀರಬಾರದು.
 • ವಾರ್ತೆಗಳು: ದಿನದ ಆಗುಹೋಗಿನ ಬಗ್ಗೆ ಸಂಕ್ಷಿಪ್ತ ಮಾಹಿತಿ ಇರಬೇಕು. ಹೆಚ್ಚಿನ ವಿವರಣೆಗಳ ಅಗತ್ಯವಿಲ್ಲ. ಕಾಲಾವಧಿ 10-15 ನಿಮಿಷಗಳನ್ನು ಮೀರಬಾರದು.
 • ವೋಕ್ಸ್ ಪೋಪ್ಯುಲಿ- ಅಂದರೆ ಜನತೆಯ ಧ್ವನಿ -ಯಾವುದೇ ಕಾರ್ಯಕ್ರಮ ಜನರ ಆದೇಶವನ್ನು ಒಳಗೊಂಡಿದ್ದರೆ ಅದು ಈ ಕ್ರಮವ್ಯವಸ್ಥೆಯಲ್ಲಿರಬೇಕು.
  DSC07044.JPG
  ಇದರಲ್ಲಿ ಸಾಧಾರಣವಾಗಿ ಓರ್ವ ವರದಿಗಾರರು ಜನರ ಮಧ್ಯೆ ಓಡಾಡುತ್ತ ಜನರನ್ನು ಪ್ರಶ್ನೆಗಳನ್ನು ಕೇಳುತ್ತಾ ಅವರ ಅಭಿಪ್ರಾಯವನ್ನು ಸಂಗ್ರಹಿಸುತ್ತಾರೆ. ಕಾಲಾವಧಿ 7-10 ನಿಮಿಷಗಳು
 • ರೇಡಿಯೋ ನಾಟಕ: ಸೃಜನಾತ್ಮಕವಾಗಿ, ಕಲಾವಿದರಿಂದ, ಉಪಯುಕ್ತವಾದ ವಿಷಯದ ಬಗ್ಗೆ ಇರಬೇಕು. ಕೆಲವು ವಿಷಯಗಳನ್ನು ಸಸಮುದಾಯ ರೇಡಿಯೋ ಕೇಂದ್ರದಲ್ಲಿ ನೇರವಾಗಿ ಹೇಳಲು ಅಸಾಧ್ಯವಾದಾಗ ನಾಟಕಗಳ ಮೊರೆ ಹೋಗಬಹುದು. ಕೇಳುಗರ ಆಸಕ್ತಿಯನ್ನು ಕೆರಳಿಸುತ್ತಾದರೂ ತುಂಬಾ ಉದ್ದವಾಗಬಾರದು. ನಾಟಕದ ಸಂಭಾಷಣೆಗಳು ಹಾಸ್ಯ ಮಿಶ್ರಿತವಾಗಿದ್ದರೆ ಚೆನ್ನ. ಕಾಲಾವಧಿ 20 ನಿಮಿಷಗಳನ್ನು ಮೀರಬಾರದು.
 • ಫೋನ್ ಇನ್: ಕಾರ್ಯಕ್ರಮದ ನಿರೂಪಕ/ಕಿ ಕೇಳುಗರಿಂದ ತಮಗಿಷ್ಟವಾದ ಹಾಡುಗಳನ್ನು ಕೇಳಲು, ರೇಡಿಯೋ ಕೇಂದ್ರ ಕಾರ್ಯಕ್ರಮಗಳ ಬಗ್ಗೆ ಟೀಕಿಸಲು, ಅಥವಾ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಮುದಾಯದ ಸದಸ್ಯರಿಂದ ದೂರವಾಣಿ ಕರೆಗಳನ್ನು ಆಹ್ವಾನಿಸುತ್ತಾರೆ. ಒಂದೇ ಕರೆಯಲ್ಲಿ ತುಂಬಾ ಹೊತ್ತು ಮಾತನಾಡಬಾರದು. ಇಂತಹ ಕಾರ್ಯಕ್ರಮ ವಾರಕ್ಕೊಮ್ಮೆ ಇದ್ದರೆ ಸೊಗಸು. ಕಾಲಾವಧಿ 30 ನಿಮಿಷಗಳನ್ನು ದಾಟಬಾರದು
 • ಟಾಕ್ ಶೋ : ಇಬ್ಬರು ನಿರೂಪಕ/ಕಿ ರು ಅಥವಾ ಒಬ್ಬರೇ ನಿರೂಪಕ/ಕಿ ರು ಒಂದು ವಿಷಯದ ಬಗ್ಗೆ ಮಾತಾನಾಡುತ್ತಾರೆ. ಕಾರ್ಯಕ್ರಮದ ಮಧ್ಯದಲ್ಲಿ ಹಾಡುಗಳಿರುತ್ತವೆ ಅಥವಾ ಕೇಳುಗರಿಂದ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಾರೆ. ಅತ್ಯಂತ ಜನಪ್ರಿಯವಾದ ಕಾರ್ಯಕ್ರಮ ಇದು. ಇದರ ಯಶಸ್ಸು ಸಂಪೂರ್ಣವಾಗಿ ಕಾರ್ಯಕ್ರಮದ ಅತಿಥೇಯರ ಮೇಲಿರುತ್ತದೆ. ಅನೇಕ ಖಾಸಗಿ ರೇಡಿಯೋ ಕೇಂದ್ರಗಳೂ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತದೆ. ಕಾಲಾವಧಿ 30 ನಿಮಿಷಗಳನ್ನು ದಾಟುವ ಹಾಗಿಲ್ಲ.
 • ರೇಡಿಯೋ ಪತ್ರಿಕೆ: ಇದು ಪತ್ರಿಕೆಯಲ್ಲಿರುವ ಎಲ್ಲ ಅಂಶಗಳನ್ನೂ ಒಳಗೊಂಡಿರುತ್ತದೆ. ಸಣ್ಣ ಕಥೆಗಳು, ಸಂದರ್ಶನಗಳು, ಚಿತ್ರ, ಹಾಸ್ಯ, ಸಂಪಾದಕರಿಗೆ ಪತ್ರ ಹೀಗೆ ಎಲ್ಲವನ್ನೂ ಒಳಗೊಂಡಿರುತ್ತದೆ. ಕಾಲಾವಧಿ 20 ನಿಮಿಷಗಳನ್ನು ಮೀರಬಾರದು
DSC06921.JPG
 • ಝಣತ್ಕಾರ(ಜಿಂಗಲ್): 15-30 ಸೆಕೆಂಡುಗಳ ಕಾಲಾವಧಿಯಲ್ಲಿ ರೇಡಿಯೋ ಕೇಂದ್ರವನ್ನು ಅಥವಾ ಒಂದು ಕಾರ್ಯಕ್ರಮವನ್ನು ಪರಿಚಯಿಸುವ ಸಂಗೀತದ ತುಣುಕು ಇದು. ಕಾರ್ಯಕ್ರಮದ ಶುರುವಿನಲ್ಲಿ, ಮುಕ್ತಾಯದಲ್ಲಿ ಅಥವಾ ಮಧ್ಯದ ಬಿಡುವಿನ ಸಮಯದಲ್ಲಿ ಈ ತುಣುಕನ್ನು ಮೊಳಗಿಸುತ್ತಿರಬೇಕು. ಕೇಳುಗರು ಯಾವಾಗ ಯಾವ ಕೇಂದ್ರಕ್ಕೆ ಹೊರಳುತ್ತಾರೆ ಎಂಬುದು ಗೊತ್ತಿರದ ಕಾರಣ ಈ ಸಂಗೀತ ತುಣುಕಿನೊಟ್ಟಿಗೆ ಕೇಂದ್ರದ ಹೆಸರನ್ನೂ ಸೇರಿಸಿದರೆ ಉತ್ತಮ.
 • ಸಮಾಜ ಸೇವಾ ಪ್ರಕಟಣೆಗಳು(PSA): ಇದು ಚಿಕ್ಕ ಚಿಕ್ಕ ಜಾಹೀರಾತುಗಳಂತಿದ್ದರೂ ಹೆಸರೇ ಸೂಚಿಸುವಂತೆ ಇವು ಸಾಮಾಜಿಕ ಪ್ರಕಟಣೆಗಳು. ಉದಾ: ನೀರು ಪೆಟ್ರೋಲ್ ಉಳಿಸಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಇರಲಿ ಇತ್ಯಾದಿ.

ಇಂತಹ ಪ್ರಕಟಣೆಗಳನ್ನು ಅರ್ಧ ಘಂಟೆಗೆ ಎರಡರಂತೆ ಕೊಡಬಹುದು. ಕಾಲಾವಧಿ 30 ಸೆಕೆಂಡುಗಳಿಂದ 1 ನಿಮಿಷದ ತನಕ.

 • ಕೇಂದ್ರದ ಅನನ್ಯತೆ: ಇದು ಕೂಡ ಝಣತ್ಕಾರದ ರೀತಿಯಲ್ಲೇ ಇರುತ್ತದೆ ಆದರೆ ಪದಗಳಲ್ಲಿ. ಕೇಳುಗರಿಗೆ ಅವರು ಯಾವ ಕೇಂದ್ರವನ್ನು ಕೇಳುತ್ತಿದ್ದರೆ ಹಾಗೂ ಅದರ ಫ್ರೀಕ್ವೆನ್ಸಿಯನ್ನು(ತರಂಗಾಂತರದಲ್ಲಿ) ಹೇಳುವುದು. ಸಮುದಾಯದ ಜನಪ್ರಿಯ ವ್ಯಕ್ತಿಯಿಂದ ಅಥವಾ ರೇಡಿಯೋ ಕೇಂದ್ರಕ್ಕೆ ಯಾರಾದರೂ ಗಣ್ಯರು ಭೇಟಿ ನೀಡೀದ್ದರೆ ಅವರ ಧ್ವನಿಯಲ್ಲಿ ಈ ಅನನ್ಯತೆಯ ಮುದ್ರಣವನ್ನು ಮಾಡಿ ಅದನ್ನು ಕೇಳಿಸಬಹುದು. ಇದರ ಕಾಲಾವಧಿ 30 ಸೆಕೆಂಡುಗಳನ್ನು ಮೀರುವಂತಿಲ್ಲ.
 • ಜಾಹೀರಾತು: ಜಾಹಿರಾತೆಂದರೆ ಒಂದು ಕಂಪನಿಯ ವ್ಯವಹಾರವನ್ನು ಹೆಚ್ಚಿಸುವುದಕ್ಕೆ, ಕಂಪನಿಯ ಆದಾಯವನ್ನು ವೃದ್ಧಿಗೊಳಿಸುವುದಕ್ಕೆ ಕಂಪನಿಯ ಬಗ್ಗೆ ಕೊಡುವ ಪ್ರಕಟಣೆಗಳು. ಜಾಹೀರಾತುಗಳು ಆದಾಯದ ಮೂಲವಾಗಿದ್ದರೂ ಜಾಹೀರಾತುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾದರೆ ಅದು ಕೇಳುಗರನ್ನು ದೂರವಾಗಿಸುತ್ತದೆ. ಜಾಹೀರಾತಿನ ಕಾಲಾವದಿ 30 ಸೆಕೆಂಡುಗಳನ್ನು ಮೀರದಿರಲಿ
 • ಸಾಕ್ಷ್ಯಚಿತ್ರ :ಇದು ರೇಡಿಯೋ ದಲ್ಲಿ ಪ್ರಸಾರವಾಗುವ ಸಾಕ್ಷ್ಯ ಚಿತ್ರ. ಅತ್ಯಂತ ಆಳವಾಗಿ ಒಳಹೊಕ್ಕು ಚಿಂತನೆ ಮಾಡಬೇಕಾದಂತಹ ವಿಷಯಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸಬಹುದು. ಸಾಕ್ಷ್ಯಚಿತ್ರಗಳು ತುಂಬಾ ಸಂಶೋಧನೆಗೆ ಒಳಪಡಬೇಕಾದ ಅಥವಾ ಸಂಕ್ಷಿಪ್ತವಾಗಿ ಹೇಳಲಾಗದ ವಿಷಯಗಳನ್ನು ಒಳಗೊಂಡಿರಬೇಕು.
DSC02116.JPG
 • ಪ್ರತ್ಯಾದಾನ: ಇದು ಕೂಡ ಟಾಕ್ ಶೋ ನಂತಿದ್ದರೂ ಇಲ್ಲಿ ವಿಷಯ ಸೀಮಿತವಾಗಿರುತ್ತದೆ. ಇಲ್ಲಿ ಪ್ರತ್ಯಾದಾನ ಪತ್ರಗಳನ್ನು ಅಥವಾ ಮಿಂಚಂಚೆಯನ್ನು ಓದುವುದು ಅಥವಾ ಪ್ರತ್ಯಾದಾನ ದ ಬಗ್ಗೆ ಕೇಂದ್ರಕ್ಕೆ ಬಂದ ದೂರವಾಣಿ ಕರೆಗಳನ್ನು ಚರ್ಚಿಸಬೇಕು. ನಿಮ್ಮ ಸಮುದಾಯ ಚಿಕ್ಕದಾಗಿದ್ದಲ್ಲಿ, ಪ್ರತ್ಯಾದಾನ ಬರೆದವರು ನಿಮಗೆ ಪರಿಚಿತರಾಗಿದ್ದರೆ ಅವರ ಅನುಕರಣೆಯನ್ನು ಮಾಡುವುದು ಬಹಳ ಚೆನ್ನಾಗಿರುತ್ತದೆ. ಕೇಳುಗರನ್ನು ನಾವು ಗುರುತಿಸುತ್ತಿದ್ದೇವೆ ಎಂಬ ಭಾವನೆ ಅವರನ್ನು ನಮಗೆ ಹತ್ತಿರ ತರುತ್ತದೆ. ಕಾಲಾವಧಿ 30 ನಿಮಿಷಗಳನ್ನು ದಾಟುವ ಹಾಗಿಲ್ಲ.
 • ನಿಮ್ಮ ಸ್ವಂತಿಕೆಯಿಂದ ಕೂಡಿದ ಯಾವುದೇ ಕಾರ್ಯಕ್ರಮ : ಮೇಲೆ ಹೇಳಿದ ಎಲ್ಲ ಕಾರ್ಯಕ್ರಮಗಳು ಸಾಂಪ್ರದಾಯಿಕವಾದುದು. ಕೇಳುಗರು ನಿರಂತರವಾಗಿರಬೇಕೆಂದರೆ ಹೊಸದನ್ನು ಹುಡುಕುತ್ತಲೇ ಇರಬೇಕಾಗುತ್ತದೆ. ಇಂತಹ ಕೆಲವು ಸಂದರ್ಭಗಳಲ್ಲಿ ನಿಯಮಗಳನ್ನು ಮುರಿದರೂ ತಪ್ಪಿಲ್ಲ. ಹೊಸ ಹೊಸ ಕಾರ್ಯಕ್ರಮಗಳನ್ನು ಪ್ರಯತ್ನಿಸಬೇಕು ಉದಾ; ಕೇವಲ ಶಬ್ದಗಳಿಂದ ಮತ್ತು ಮೌನದಿಂದ ಒಂದು ಕಥೆಯನ್ನು ನಿರೂಪಿಸಲು ಪ್ರಯತ್ನಿಸುವುದು ಇತ್ಯಾದಿ.ರೇಡಿಯೋದಲ್ಲಿನ ಸಂಶೋಧನೆಗಳು

 • ಕಲಾಪದ ಮುಂದಾಳು :ಅಭ್ಯರ್ಥಿ
 • ಗರಿಷ್ಟ ಕಾಲಮಿತಿ: 90 ನಿಮಿಷಗಳು
 • ಉದ್ದೇಶ : ಸಮುದಾಯ ರೇಡಿಯೋ ಕೇಂದ್ರದಲ್ಲಿ ಸಂಶೋಧನೆಯಲ್ಲಿನ ಕೇಂದ್ರಿಕರಣ ವ್ಯವಸ್ಥೆಯ ಬಗ್ಗೆ ತಿಳಿಸುವುದು,ಅಭ್ಯರ್ಥಿಗಳಿಗೆ ಸಮುದಾಯ ರೇಡಿಯೋ ಕೇಂದ್ರ ನಡೆಸುವಾಗ ಎದುರಾಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡುವುದು, ಸಮುದಾಯದ ಸದಸ್ಯರು ಭಾಗವಹಿಸಬಹುದಂತಾದ ಕೇಳಬಹುದಂತಾದ ಸಪ್ರಮಾಣವಾದ ನಂಬಲರ್ಹವಾದ ವಿಷಯಗಳನ್ನು ಅಭಿವೃದ್ಧಿಗೊಳಿಸುವುದು.

ಚಟುವಟಿಕೆಗಳು

ಇಲ್ಲಿ ಅಭ್ಯರ್ಥಿಗಳಿಗೆ ಸಂಶೋಧನೆಯ ಪ್ರಾಮುಖ್ಯತೆ ಹಾಗೂ ಈ ರೀತಿಯ ಸಂಶೋಧನೆಗಳಿಂದ ರೇಡಿಯೋ ಕೇಂದ್ರ ಹೇಗೆ ಅಭಿವೃದ್ಧಿಹೊಂದುತ್ತದೆ ಎಂಬ ವಿಷಯಗಳನ್ನು ತಿಳಿಸಿ ಕೊಡಲಾಗುತ್ತದೆ. ಮುಖ್ಯವಾಗಿ ಎರಡು ರೀತಿಯ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತದೆ. ಕಾರ್ಯಕ್ರಮ ಪೂರ್ವ ಸಂಶೋಧನೆ ಹಾಗೂ ಕಾರ್ಯಕ್ರಮ ನಂತರ ಸಂಶೋಧನೆ. ಪೂರ್ವ ಸಂಶೋಧನೆ ಯಾವ ರೀತಿಯ ಯಾವ ವಿಷಯದ ಬಗ್ಗೆ ಕಾರ್ಯಕ್ರಮಗಳನ್ನು ರೇಡಿಯೋದಲ್ಲಿ ಪ್ರಸಾರ ಮಾಡಬಹುದು ಎಂಬುದರ
200x
ಕುರಿತಾಗಿರುತ್ತದೆ. ಯಾವ ಸಮುದಾಯದ ಕುರಿತು ಮಾತನಾಡುತ್ತಿದ್ದೇವೆ, ಆ ಸಮುದಾಯದ ಬೇಕು ಬೇಡಗಳೇನು ಎಂಬುದರ ಬಗ್ಗೆ ಚಿಂತನೆ ನಡೆಯುತ್ತದೆ. ನಂತರದ ಸಂಶೋಧನೆ ಈಗಾಗಲೇ ಪ್ರಸಾರವಾದ ಕಾರ್ಯಕ್ರಮಗಳ ಬಗ್ಗೆ ಜನರ ಅಭಿಪ್ರಾಯವೇನು ಎಂಬುದರ ಬಗ್ಗೆ ಆಗಿರುತ್ತದೆ. ಇದು ಪ್ರತ್ಯಾದಾನಗಳನ್ನು ಸಂಗ್ರಹಿಸುವುದರ ಬಗ್ಗೆ, ಕೇಳುಗರನ್ನು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂಬಿತ್ಯಾದಿ ವಿಷಯಗಳನ್ನು ಒಳಗೊಂಡಿರುತ್ತದೆ.

ಪೂರ್ವ ಸಂಶೋಧನೆಯ ಒಂದು ಭಾಗವೆಂದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರೂ ಹಳ್ಳಿಯೊಳಗೆ 30 ನಿಮಿಷಗಳಷ್ಟು ಕಾಲ ಸುತ್ತಾಡಿ ತಾವು ಕಂಡ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಆ ವಿಷಯ ನೆನಪಿನಲ್ಲಿ ಉಳಿದ್ದಿದೇಕೆ ಎಂಬುದರ ಬಗ್ಗೆ ಕೂಡ ಹೇಳಬೇಕು. ಇದು ಕಾರ್ಯಕ್ರಮದಲ್ಲಿ ವೈವಿದ್ಯವಾದ ವಿಷಯಗಳನ್ನೂ ಗ್ರಹಿಕೆಗಳನ್ನೂ ತರುವುದಲ್ಲದೇ ಒಂದು ಜಾಗ ಒಂದೆ ಸಮಯದಲ್ಲಿ ಪ್ರತಿಯೊಬ್ಬರಿಗೂ ಹೇಗೆ ಎಷ್ಟು ವೈವಿಧ್ಯವಾಗಿ ಕಾಣುತ್ತದೆ ಎಂಬುದನ್ನೂ ತೋರಿಸಿಕೊಡುತ್ತದೆ. ಈಗ ಅಭ್ಯರ್ಥಿಗಳಿಗೆ ನಾವು ತಿಳಿಸುವುದೇನೆಂದರೆ ಅವರೀಗ ರೇಡಿಯೋ ವೃತ್ತಿಗಾರರಾಗಿದ್ದಾರೆ. ಆದ್ದರಿಂದ ಪ್ರತಿಯೊಂದು ನಿಮಿಷ ಅವರು ರೇಡಿಯೋ ಕಾರ್ಯಕ್ರಮದ ಬಗ್ಗೆ ಯೋಚಿಸುತ್ತಿರಬೇಕು. ಜೊತೆಗೆ ತಮ್ಮ ಕಣ್ಣಿಗೆ ಬೀಳುವ ಅಸಾಮಾನ್ಯವಾದ ಪ್ರತಿಯೊಂದು ವಿಶಯವನ್ನೂ ಗ್ರಹಿಸುತ್ತಿರಬೇಕು, ಸಮುದಾಯದ ಎಲ್ಲರೊಂದಿಗೆ ಉತ್ತಮವಾದ ಸಂಭಂಧಗಳನ್ನು ಬೆಳೆಸಿಕೊಳ್ಳಬೇಕು. ಕಾರ್ಯಕ್ರಮ ನಂತರ ಸಂಶೋಧನೆಯಾದರೆ ಪ್ರತ್ಯಾದಾನದ ಸಂಗ್ರಹಿಸುವಿಕೆಯ ಬಗ್ಗೆ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ ಇದರಿಂದ ವರದಿಗಾರರಾಗಿ ಹೋಗುವವರು ತಮ್ಮ ವರದಿಗಳೊಂದಿಗೆ ಪ್ರತ್ಯಾದಾನವನ್ನೂ ಸಂಗ್ರಹಿಸಬಹುದು. ಅಲ್ಲದೆ ಇದು ಮಾನವ ಕುಲದ ಸಂಬಂಧಗಳನ್ನೂ ತಿಳಿಸುವುದರಿಂದ ಪ್ರತ್ಯಾದಾನವೆಂದರೆ ಕೇವಲ ಕೇಳುಗರೆಷ್ಟು ಎಂಬುದನ್ನು ಲೆಕ್ಕ ಹಾಕುವ ಸಾಧನವಲ್ಲ. ಕಲಾಪದ ಮುಂದಾಳು