Community Media/MARAA/Community Radio/Kannada/Production/Studio Recording

From WikiEducator
Jump to: navigation, search

ಕಂಡೇನ್ಸರ್ ಮೈಕ್ರೋಪೋನ್

ನೆನಪಿನಲ್ಲಿಡಬೇಕಾದ ಮೂರು ಪ್ರಧಾನ ಸಂಗತಿಗಳು

ಮೊದಲನೆಯದಾಗಿ: ಸೂಕ್ಷ್ಮತೆಯಿಂದ ಕೂಡಿರುವುದರಿಂದಾಗಿ ಉತ್ತಮ ಗುಣಮಟ್ಟದ ಶಬ್ದವನ್ನು ಉತ್ಪಾದಿಸುತ್ತದೆ. ಎರಡನೆಯದಾಗಿ: ಇದಕ್ಕೆ ಶಕ್ತಿಯ ಮೂಲ ಬೇಕು ಸಾಮಾನ್ಯವಾಗಿ ಇದನ್ನು ಮಿಕ್ಸರ್ ಅಥವಾ ಬ್ಯಾಟರಿಯಿಂದ ಪಡೆದುಕೊಳ್ಳಬೇಕಾಗಿದೆ. ಮೂರನೆಯದಾಗಿ: ಈ ಮೈಕ್ರೋಪೋನ್ ಹೆಚ್ಚು ಬೆಲೆಬಾಳುವಂತದ್ದು.

ಸಾಮಾನ್ಯವಾಗಿ ಇವು ಸ್ಟುಡಿಯೋ ಒಳಗಿರುತ್ತವೆ ಯಾಕೆಂದರೆ ಇಲ್ಲಿ ಇವುಗಳನ್ನು ಹೆಚ್ಚು ಜಾಗರೂಕತೆಯಿಂದ ಇರಿಸಲಾಗುತ್ತದೆ ಹಾಗೂ ಹಾನಿಯಾಗುವ ಸಂಭವಗಳೂ ಇದೆ.


ಡೈನಾಮಿಕ್ ಮೈಕ್ರೋಪೋನ್

ಇವುಗಳು ಬೆಲೆಬಾಳುವಂತವುಗಳಾಗಿಲ್ಲ ಹಾಗಾಗಿ ಇವುಗಳನ್ನು ಸ್ಟುಡಿಯೋದ ಒಳಗೆ ಬಳಸಲಾಗುತ್ತದೆ. ಇವುಗಳು ತೇವವನ್ನು ತಡೆಹಿಡಿಯುವ ಗುಣವುಳ್ಳವುಗಳಾಗಿವೆ. ಇದರ ಒಳಗೆ ರಬ್ಬರ್ ಹೊಂದಿದ್ದು, ದೃಢ ಮೈಕ್ರೋಪೋನ್ ಗಳಾಗಿವೆ. ಆದರೆ ಕಂಡೆನ್ಸರ್ ಮೈಕ್ರೋಪೋನ್ ಜೊತೆ ಹೋಲಿಸಿದರೆ ಇವು ಧ್ವನಿಮುದ್ರಣ ಮಾಡಲು ಉತ್ತಮವಾದ ಸಾಧನಗಳೇನೂ ಅಲ್ಲ. Shure ಕಂಪನಿಯ SM-58 ಖ್ಯಾತ ಡೈನಾಮಿಕ್ ಮೈಕ್ರೋಪೋನ್ ಗಳಾಗಿವೆ.

ಚಟುವಟಿಕೆ: ಕಂಡೇನ್ಸರ್ ಮೈಕ್ರೋಪೋನ್ ಗಳು ಹಾಗೂ ಡೈನಾಮಿಕ್ ಮೈಕ್ರೋಪೋನ್ ಗಳಿಂದ ರೆಕಾರ್ಡ್ ಮಾಡಲು ಯತ್ನಿಸಿ ಮತ್ತು ಅವುಗಳನ್ನು ಹೋಲಿಸಿ, ಯಾವ ಮೈಕ್ರೋಪೋನ್ ಉತ್ತಮವಾಗಿ ಬಳಸಬಹುದು ಎಂಬುದರ ಬಗ್ಗೆ ಚರ್ಚಿಸಿ.


ಶಬ್ದದ ಲಕ್ಷಣಗಳು

ನೀವು ಅದನ್ನು ವಿಶ್ಲೇಷಿಸುವ ಮೊದಲು ನೀವು ಡಿಜಿಟಲ್ ಶಬ್ದದ ಬಗ್ಗೆ ಅರಿತುಕೊಳ್ಳಬೇಕಾದುದು ಮುಖ್ಯ ಹೆಚ್ಚಿನ ಸಂದರ್ಭಗಳಲ್ಲಿ ನೀವು ರೆಕಾರ್ಡರ್ ಅಥವಾ ಕಂಪ್ಯೂಟರ್ ನಲ್ಲಿರುವ ಶಬ್ದವು ಡಿಜಿಟಲ್ ಸ್ಟಿರಿಯೋ ಟ್ರಾಕ್ ಬಗ್ಗೆ ಕಂಪ್ಯೂಟರ್ ನಲ್ಲಿ ಶಬ್ದವನ್ನು ಧ್ವನಿಮುದ್ರಿಸಲು ಯತ್ನಿಸುವುದು ಉತ್ತಮ. ಯಾಕೆಂದರೆ ಈ ಶಬ್ದವು ಎಡ ಮತ್ತು ಬಲದಲ್ಲಿ ಅಂದರೆ ಎರಡು ಚಾನಲ್ ಗಳಲ್ಲಿ ಗೋಚರಿಸುವುದು. ಅರ್ಥಾತ್ ಎಡ ಸ್ಪೀಕರ್ ಮತ್ತು ಬಲ ಸ್ಪೀಕರ್ ಗಳಲ್ಲಿ ಕೇಳಿಸುತ್ತವೆ.


ಶಬ್ದದ ಹಾದಿ

ಸ್ಟುಡಿಯೋದಲ್ಲಿ ಧ್ವನಿಮುದ್ರಣ ಮಾಡಬೇಕಾದರೆ ಶಬ್ದವು ಯಾವ ಹಾದಿಯಲ್ಲಿ ಸಾಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿರಬೇಕು. ಹಾಗೂ ಇದರ ನಡುವೆ ಎದುರಾಗುವ ವಿವಿಧ ಹಾರ್ಡ್ ವೇರ್ ಸಮಸ್ಯೆಗಳ ಬಗ್ಗೆ ನಿಮಗೆ ತಿಳಿದಿರಬೇಕು.

  • ಶಬ್ದದ ಮೂಲವು ಮೊದಲು ಮೈಕ್ರೋಪೋನ್ ನಿಂದ ಶುರುವಾಗತ್ತೆ.
  • ಮೈಕ್ರೋಪೋನ್ ನಿಂದ ಇದು ಮಿಕ್ಸರ್ ಗೆ ತಂತಿಗಳ (ಕೇಬಲ್ಗಳ) ಮುಖಾಂತರ ಸಾಗುತ್ತದೆ.
  • ಮಿಕ್ಸರ್ ಗೆ ತಲುಪಿದಾಗ ಪರಿಮಾಣ(volume), ಟ್ರಬಲ್, ಬಾಸ್ ಮೊದಲಾದುವುಗಳು ನಿಯಂತ್ರಿಸಲ್ಪಡುತ್ತದೆ ಮತ್ತು ಅಲ್ಲಿಂದ ಇನ್ನೊಂದು ಕೇಬಲ್ ಮೂಲಕ ಅದು ಕಂಪ್ಯೂಟರ್ ಗೆ ಸಾಗುತ್ತದೆ.
  • ಒಮ್ಮೆ ಅದು ಕಂಪ್ಯೂಟರ್ ಗೆ ತಲುಪಿದರೆ, ಅದು ಬಾಹ್ಯ ಶಬ್ದ ಕಾರ್ಡ್ ನಲ್ಲಿ (ಸೌಂಡ್ ಕಾರ್ಡ್)ಅಥವಾ ಸರಂಚಿತ ಶಬ್ದ ಕಾರ್ಡ್ ನಲ್ಲಿ ನೊಂದಾಯಿಸಲ್ಪಡುತ್ತದೆ ತದನಂತರ ಸಾಪ್ಟ್ ವೇರ್ ಗೆ ಹೋಗುತ್ತದೆ.
  • ಸಾಪ್ಟ್ ವೇರ್ ನಲ್ಲಿ ಅದೇ ಶಬ್ದವು ಅಲೆಗಳಂತೆ ನೊಂದಾಯಿಸಲ್ಪಡುವುದು. ನೀವು ಅದನ್ನ ಪರದೆಯ ಮೇಲೆ ಕಾಣುವಿರಿ.
  • ಶಬ್ದವು ಅದೇ ವೇಗವಾಗಿ ಹರಿಯುತ್ತದೆ. ಅದರ ಹರಿಯುವಿಕೆಯ ಬಗ್ಗೆ ನಿಮಗೆ ತಿಳಿಯುವುದಿಲ್ಲ ಮೈಕ್ರೋಪೋನಿನಿಂದ ಕಂಪ್ಯೂಟರ್ ಗೆ ಹರಿಯುವಾಗ ಇದೊಂದು ತಟ್ಟನೆ (ತಕ್ಷಣವಾಗಿ) ಜರಗುವ ಕ್ರಿಯೆಯೆಂದು ಅನಿಸುತ್ತದೆ.
  • ಕಂಪ್ಯೂಟರ್ ನಿಂದ ಶಬ್ದವು ನೋಡಿಕೊಳ್ಳುವ(ಮಾನಿಟರಿಂಗ್)ಸ್ಪೀಕರ್ ಗಳಿಗೆ ಅಥವಾ ಕಂಪ್ಯೂಟರ್ ಸ್ಪೀಕರ್ ಗಳಿಗೆ ಹಿಮ್ಮುಖವಾಗಿ ಹರಿಯುವುದು. ಹಾಗೂ ಇದು ಅನಲಾಗ್ (analog)ಶಬ್ದವಾಗಿ ಮಾರ್ಪಾಟು ಹೊಂದುತ್ತದೆ. ಇದು ಮಾನವನ ಕಿವಿಗೆ ಕೇಳಿಸುವುದು.


ಮುಖ್ಯ ಪುಟಕ್ಕೆ ವಾಪಸ್ಸು ಹೋಗಲು ಇಲ್ಲಿ ಕ್ಲಿಕ್ಕಿಸಿ