Community Media/MARAA/Community Radio/Kannada/Production/Radio Demonstration

From WikiEducator
Jump to: navigation, search
ರೇಡಿಯೋ ಟವರ್.JPG
ಕೇಳುಗರಿಗಾಗಿ ಪ್ರಸಾರ ಮಾಡುವ ನಿಟ್ಟಿನಲ್ಲಿ ನಾವು ಡಿಜಿಟಲ್ ಶಬ್ದವನ್ನು ಬಳಸುವ ಬಗ್ಗೆ ಅಭ್ಯರ್ಥಿಗಳಲ್ಲಿ ಮಾತನಾಡುತ್ತೇವೆ. ಮಾತುಗಳ ಶಬ್ದವು ಮೈಕ್ರೋ ಪೋನ್ ನಲ್ಲಿ ಹೇಗೆ ಧ್ವನಿಮುದ್ರಣ ಆಗುತ್ತದೆ ತದನಂತರ ಅದನ್ನು ಮಿಕ್ಸಿಂಗ್ ಉಪಕರಣಗಳ ಮುಖಾಂತರ ಏನು ಮಾಡಲಾಗುತ್ತದೆ. ಆಮೇಲೆ ನಡೆಯುವ ಕಾರ್ಯಗಳು ಇದರ ನಂತರ ಕಂಪ್ಯೂಟರ್ ಗೆ ಹೇಗೆ ನೀಡಲಾಗುತ್ತದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ನೀಡಲಾಗುತ್ತದೆ. ಇದಾದ ನಂತರ ನಾವು ತಂತ್ರಾಂಶಗಳನ್ನು ಬಳಸಿ ಕಂಪ್ಯೂಟರ್ ನಲ್ಲಿ ಸಂಕಲನ ಮಾಡುತ್ತೇವೆ. ಆಮೇಲೆ ಶಬ್ದವನ್ನು ಕಂಪ್ಯೂಟರ್ ನಿಂದ ಟ್ರಾನ್ಸ್ ಮೀಟರ್ ಗೆ ಕಳುಹಿಸುತ್ತೇವೆ. ಈ ಟ್ರಾನ್ಸ್ ಮೀಟರ್ ಶಬ್ದದ ಸಂಕೇತಗಳನ್ನು (ಇದೀಗ ಎಲೆಕ್ಟ್ರೋ ಮ್ಯಾಗ್ನಟಿಕ್ ಸಂಕೇತವಾಗಿ ಬದಲಾಗಿರುತ್ತದೆ) ಆಂಟೇನಾಗೆ ಕಳುಹಿಸಿದಾಗ ಅದು ಗಾಳಿಯ ಮೂಲಕ ಅದನ್ನ ಪ್ರಸಾರವಾಗುವಂತೆ ಮಾಡುತ್ತದೆ.ವ್ಯಾಟ್ಸ್ ನಲ್ಲಿ (watts) ಮಾಪನ ಮಾಡಲ್ಪಡುವ ಟ್ರಾನ್ಸ್ ಮೀಟರ್ ನ ಸಾಮಾರ್ಥ್ಯ ಹಾಗೂ ಮೀಟರ್ ನಲ್ಲಿ ಮಾಪನ ಮಾಡುವಂತಹ ಆಂಟೇನಾದ ಎತ್ತರ ಇವುಗಳಿಂದ ರೇಡಿಯೋ ಸಂಕೇತ ಎಷ್ಟು ದೂರ ತಲುಪುತ್ತವೆ ಎಂಬುದನ್ನ ನಿರ್ಧರಿಸಲಾಗುವುದು. ನಿಮ್ಮ ರೇಡಿಯೋ ಸೆಟ್ ರೇಡಿಯೋ ಸಂಕೇತವನ್ನು ಶಬ್ದವಾಗಿ ಡಿಕೋಡ್ ಮಾಡುತ್ತವೆ. ಇದು ರೇಡಿಯೋ ಸ್ಪೀಕರ್ ಮೂಲಕ ಕೇಳುತ್ತದೆ. ಇದಾದ ನಂತರ ನಾವು ರೇಡಿಯೋ ಅಲೆಗಳ ತರಂಗಾಂತರವನ್ನು ಏರಿಳಿತ(modulates) ಮಾಡುವಂತಹ FM ರೇಡಿಯೋಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡುತ್ತೇವೆ. ವಿವಿಧ ವೇಗವುಳ್ಳ ತರಂಗಾಂತರವನ್ನು ಏರಿಳಿತ(modulate)ಮಾಡಿ ಅವುಗಳ ಮೌಲ್ಯವನ್ನು ಗೊತ್ತುಮಾಡಲಾಗುವುದು(allocate). ಆದ್ದರಿಂದ ಹತ್ತರ ಆರು ಘಾತದಿಂದ ನಿಮ್ಮ ತರಂಗಾಂತರ ಸಂಖ್ಯೆಯನ್ನು ಗುಣಿಸಿದರೆ ಅದರ ಮೆಗಾಹರ್ಟ್ಸ್(Mega Hertz )ತರಂಗಾಂತರ ದೊರಕುತ್ತದೆ.


ಮುಖ್ಯ ಪುಟಕ್ಕೆ ವಾಪಸ್ಸು ಹೋಗಲು ಇಲ್ಲಿ ಕ್ಲಿಕ್ಕಿಸಿ