Community Media/MARAA/Community Radio/Kannada/Participation

From WikiEducator
Jump to: navigation, search



ಇದೊಂದು ಪ್ರಮುಖ ಪದ ಮತ್ತು ಪ್ರಮುಖ ಕಲ್ಪನೆ. ಸಮುದಾಯ ರೇಡಿಯೋ ಕೇಂದ್ರಕ್ಕೆ ಅತ್ಯಂತ ಅಗತ್ಯವಾದದ್ದು. ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಹಲವಾರು ಮಟ್ಟದ ದಾರಿಗಳಿವೆ.

ಸಾಮರ್ಥ್ಯ ಧಾರಣೆ

ಉದ್ದೇಶ : ಸಮುದಾಯಗಳು ಕಾರ್ಯಕ್ರಮ ರೂಪಿಸುವಲ್ಲಿ ಶ್ರೋತೃಯರಾಗುವಲ್ಲಿ ಮತ್ತು ತಮ್ಮ ಅನಿಸಿಕೆಗಳನ್ನು ಹೇಳುವಂತೆ ಭಾಗವಹಿಸಲು ಬೇಕಾಗುವ ತಂತ್ರವನ್ನಳವಡಿಸಿಕೊಳ್ಳಲು.

ಸೂಚನೆ : ಈ ಕಾರ್ಯಗಾರದ ಕೊನೆಯ ಹೊತ್ತಿಗೆ ಉದ್ದೇಶಿತ ಸಮುದಾಯ ರೇಡಿಯೋ ಕೇಂದ್ರದಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವುದಕ್ಕೆ (ಗುಣಮಟ್ಟ ಮತ್ತು ಸಂಖ್ಯೆಗಳೆರಡರಲ್ಲಿಯೂ)ಬೇಕಾದ ತಂತ್ರಗಾರಿಕೆ ರೂಪಿಸಬೇಕು.

ಕಾಲಾವಧಿ : ಕಾರ್ಯಗಾರದ ಸಾಮಾನ್ಯ ಅವಧಿ 2ದಿನಗಳು ಆದರೆ ಭಾಗವಹಿಸಿದ ಜನರ ಮನೋಸಾಮರ್ಥ್ಯ ಮತ್ತು ಕೊರತೆಗಳನ್ನು ಗಮನದಲ್ಲಿಟ್ಟುಕೊಂಡು ಜನಮತ ಅರಿಯಲು ಎರಡು ದಿನಗಳನ್ನು ಕಳೆದು,ಮೂರನೇ ದಿನ ಭಾಗವಹಿಸುವಿಕೆ ಹೆಚ್ಚಿಸುವ ತಂತ್ರಗಾರಿಕೆಯನ್ನು ರೂಪಿಸಬಹುದು.

ಅಭ್ಯರ್ಥಿಗಳು : ವರದಿಗಾರರು, ಸ್ವಯಂಸೇವಕರು ಮತ್ತು ಸಮುದಾಯ ರೇಡಿಯೋ ಕೇಂದ್ರದಲ್ಲಿ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುವ ಇತರರು. ಉದಾಹರಣೆಗೆ: ನಿರ್ಮಾಪಕರು, ಸ್ಟೇಷನ್ ಮ್ಯಾನೇಜರ್.

ಬೆಂಕಿಕಡ್ಡಿ ಆಟ

  • ಅಧ್ಯಕ್ಷತೆ: ಪ್ರಯೋಜಕ
  • ಅವಧಿ: 30ನಿಮಿಷಗಳು
  • ಉದ್ದೇಶ: ಅಭ್ಯರ್ಥಿಗಳ ದೃಷ್ಠಿಯಲ್ಲಿ ಪ್ರಸ್ತುತ ಸನ್ನಿವೇಶವನ್ನು ಅರ್ಥೈಸಿಕೊಳ್ಳುವುದು ಮತ್ತು ಅಭ್ಯರ್ಥಿಗಳಿಗೆ ಸನ್ನಿವೇಶದ ಸೂಕ್ಷ್ಮಚಿತ್ರಣ ಮಾಡಿಕೊಡುವುದು.



Icon activity.jpg
Activity
ಚಟುವಟಿಕೆ: ಅಭ್ಯರ್ಥಿಗಳಿಗೆ ಒಬ್ಬೊಬ್ಬರಾಗಿ ಬೆಂಕಿಕಡ್ಡಿಯನ್ನು ಗೀಚುವಂತೆ ಹೇಳಿ ಅವರಿಗೊಂದು ವಾಕ್ಯವನ್ನು ವಹಿಸಿ ಅದಕ್ಕೆ ಪ್ರತಿಕ್ರಿಯಿಸುವಂತೆ ಹೇಳಿ.
Racing the matcstick.JPG

ಯಾರ ಬಳಿ ಅತಿ ಕಡಿಮೆ ಕಡ್ಡಿಗಳಿರುತ್ತವೋ ಮತ್ತು ಸ್ವಷ್ಟ ಉತ್ತರವಿರುತ್ತದೋ ಅವರು ಗೆದ್ದಂತೆ.




ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾಲ್ಕು ಮೂಲೆಗಳು

  • ಅಧ್ಯಕ್ಷತೆ: ಅಭ್ಯರ್ಥಿಯೊಬ್ಬರು
  • ಅವಧಿ: 30 ನಿಮಿಷಗಳು
  • ಉದ್ದೇಶ: ಸಮುದಾಯ ಭಾಗವಹಿಸುವಿಕೆಯ ಬಗ್ಗೆ ಚರ್ಚೆಯನ್ನು ಉದ್ದೀಪನಗೊಳಿಸುವುದು.



Icon activity.jpg
Activity
ಚಟುವಟಿಕೆ

ಅಭ್ಯರ್ಥಿಗಳ ನಾಲ್ಕು ಗುಂಪು ಮಾಡಿ ಸಮುದಾಯ ಭಾಗವಹಿಸುವಿಕೆಯ ಮಿಥ್ಯ/ಸತ್ಯಗಳ ಬಗ್ಗೆ ಚರ್ಚಿಸಲು ಪ್ರೋತ್ಸಾಹಿಸಿ.



ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಳ್ಳಿ ನಡೆ

  • ಅಧ್ಯಕ್ಷರು: ಅಭ್ಯರ್ಥಿಗಳು
  • ಅವಧಿ: 60ನಿಮಿಷಗಳು
  • ಉದ್ದೇಶ: ಸಮುದಾಯದ ಗುರಿ, ದಾರಿ ಮತ್ತು ಸಂವಾದಗಳ ಬಗ್ಗೆ ಹೊಸ ಚಿಂತನೆಗಳನ್ನು ಮೂಡಿಸುವುದು.



Icon activity.jpg
Activity
ಚಟುವಟಿಕೆ

ಅಭ್ಯರ್ಥಿಗಳ ಗುಂಪುಗಳು ಸಮುದಾಯಗಳಿಗೆ ಬೇಟಿ ನೀಡಬೇಕು. ವಿವಿಧ ಉದ್ದಿಷ್ಟಗಳೊಂದಿಗೆ ನೀಡುವ ಈ ಬೇಟಿ ಹೊಸ ಬೆಳಕು ಚೆಲ್ಲಬೇಕು.



ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನ್ಯಾರೋಕಾಸ್ಟಿಂಗ್

  • ಅಧ್ಯಕ್ಷರು: ಅಭ್ಯರ್ಥಿಗಳು
  • ಅವಧಿ: 120ನಿಮಿಷಗಳು
  • ಉದ್ದೇಶ: ಶಿಬಿರಾರ್ಥಿಗಳನ್ನು ನಾರೋಕಾಸ್ಟಿಂಗ್ ತಂತ್ರ ಮತ್ತು ವಿಧಾನಗಳನ್ನು ಪರಿಚಯಿಸುವುದು. ಮತ್ತು ಪ್ರತಿಕ್ರಿಯೆ ಹಾಗೂ ವಿಷಯಗಳಲ್ಲಿ ಸಮುದಾಯ ಭಾಗವಹಿಸಿಕೆಯನ್ನು ಹೆಚ್ಚು ಮಾಡುವುದು



Icon activity.jpg
Activity
ಭಾಗವಹಿಸುವ ತಂಡಗಳು ಅಣಕು ನಾರೋಕಾಸ್ಟ್ ಮಾಡುವುದು ಮತ್ತು ನಾರೋಕಾಸ್ಟಿಂಗ್ ಅನ್ನು ಆಯ್ದ ಹಳ್ಳಿಗಳಲ್ಲಿ ಪ್ರಾರಂಭಿಸುವುದು



ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚಿತ್ರ ಪ್ರದರ್ಶನ

  • ಅಧ್ಯಕ್ಷರು: ಅಭ್ಯರ್ಥಿ
  • ಅವಧಿ: 45 ನಿಮಿಷಗಳು
  • ಉದ್ದೇಶ: ತಂಡ ಕಟ್ಟುವ ಚಟುವಟಿಕೆಗಳು ಸಾರ್ವತ್ರಿಕವಾಗಿ ಸಮುದಾಯವನ್ನು ಒಗ್ಗೂಡಿಸಿ, ಕಾರ್ಯಕ್ರಮಗಳ ಪರಿಚಯ ಮಾಡಿಕೊಡುವುದು.



Icon activity.jpg
Activity
ಚಟುವಟಿಕೆ

ಭಾಗವಹಿಸಿದ ಗುಂಪುಗಳು ಆರಿಸಿದ ಹಳ್ಳಿಯಲ್ಲಿ, ಆರಿಸಿದ ಚಲನಚಿತ್ರ ಪ್ರದರ್ಶನವನ್ನೇರ್ಪಡಿಸಬೇಕು.



ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ


ಪ್ರಕರಣ ಅಧ್ಯಯನ

ಮರಾ ಆಗಸ್ಟ್ 11ರಿಂದ 13ರವರೆಗೆ ರೇಡಿಯೋ ಬುಂದೇಲ್ ಖಂಡ ಜೊತೆಯಲ್ಲಿ ಕಾರ್ಯಾಗಾರವೊಂದನ್ನು ಏರ್ಪಡಿಸಿತ್ತು. ಮೇಲಿನ ವಿಧಗಳನ್ನು ಉಪಯೋಗಿಸಿ ಎರಡು ದಿನದ ಕಾರ್ಯಾಗಾರದ ನಂತರ ಮೂರನೇ ದಿನ ಸನ್ನಿವೇಶಕ್ಕೆ ತಕ್ಕುದಾದ ಒಂದು ನಿರ್ಧಾರಕ್ಕೆ ಬರಲಾಯಿತು.


ನಾವು ಈ ಮಾದರಿಯನ್ನು ಬಳಸಿ ರೇಡಿಯೋ ಬುಂದೆಲ್ ಖಂಡ್ ಸಮುದಾಯ ರೆಡಿಯೋ ಕೇಂದ್ರ ಮದ್ಯಪ್ರದೆಶ್ ನಲ್ಲಿ ಹೇಗೆ ಮಾಡಿದ್ದೇವೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ

ಇತರೆ ವಿಧಾನಗಳು

ಮೇಲೆ ಹೇಳಿದ ಚಟುವಟಿಕೆಗಳಷ್ಟೆ ಅಲ್ಲದೇ, ಇನ್ನೂ ಅನೇಕ ವಿಧಾನಗಳನ್ನು ಸಮುದಾಯ ಭಾಗವಹಿಸುವಿಕೆಯನ್ನು ಉತ್ತಮಗೊಳಿಸಲು ಬಳಬಹುದು. ಇವುಗಳಲ್ಲಿ ಹಲವನ್ನು ನಾವು ಹಿಂದೆ ಬಳಸಿ ಅವುಗಳ ಉಪಯುಕ್ತತೆಯನ್ನು ಮನಗಂಡಿದ್ದೇವೆ. ನೀವು ಕಂಡುಕೊಂಡ ವಿಧಾನಗಳೇನಾದರೂ ಇದ್ದರೆ ಅವನ್ನು ಈ ಪಟ್ಟಿಯಲ್ಲಿ ಸೇರಿಸಲು ನಿಮಗೆ ಸ್ವಾಗತ.

  • ಕಳೆದ ಒಂದು ವಾರದಲ್ಲಿ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ಸಂಬಳ ಪಡೆಯುವ ಸಿಬ್ಬಂದಿಯ ಧ್ವನಿ ಎಷ್ಟ ಭಾಗ ಮತ್ತು ಸಮುದಾಯದ ಸದಸ್ಯರ ಧ್ವನಿ ಎಷ್ಟು ಭಾಗ ಇದೆ ಎಂದು ಕಂಡು ಹಿಡಿಯಿರಿ.
  • ಕಳೆದ ಒಂದು ವಾರದ ಕಾರ್ಯಕ್ರಮದಲ್ಲಿ ಒಟ್ಟು ಪ್ರಸಾರವಿರುವ ಹಳ್ಳಿಗಳಲ್ಲಿ ಎಷ್ಟು ಹಳ್ಳಿಗಳು ಕಾರ್ಯಕ್ರಮ ನೀಡುವಲ್ಲಿ ಭಾಗವಹಿಸಿ ಎಂದು ಪತ್ತೆ ಹಚ್ಚಿ.
  • ಕಳೆದ ಒಂದು ವಾರದ ಕಾರ್ಯಕ್ರಮದಲ್ಲಿ ಯಾವ ಸಮುದಾಯದ ಯಾವ ವ್ಯಕ್ತಿಗಳು ಕಾರ್ಯಕ್ರಮ ನೀಡಿದ್ದಾರೆ,ಎಂದು ಪಟ್ಟಿ ಮಾಡಿ. ಯಾರ್ಯಾರು ರೇಡಿಯೋ ಕಾರ್ಯಕ್ರಮದಲ್ಲಿ ಪ್ರಾತಿನಿಧ್ಯ ಪಡೆದಿದ್ದಾರೆ. ಮತ್ತು ಒಟ್ಟಾರೆ ಸಮುದಾಯದಲ್ಲಿ ಅವರ ಪಾತ್ರ ಎಂತಹುದು, ಜಾತಿ, ಧರ್ಮ, ಲಿಂಗ ಮತ್ತು ವಯಸ್ಸಿನ ಆಧಾರದ ಮೇಲೆ ಸಮುದಾಯದ ಭಾಗವಹಿಸುವಿಕೆ ಈ ಕಾರ್ಯಕ್ರಮಗಳಲ್ಲಿ ನಡೆದಿದೆಯೇ ಎಂದು ವಿಚಕ್ಷಿಸಿ.
  • ಕಳೆದ ಒಂದು ವಾರದ ಅವಧಿಯಲ್ಲಿ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ಚರ್ಚಿತವಾದ ವಿಷಯ/ಸಮಸ್ಯೆಗಳನ್ನು ಗುರುತಿಸಿ. ಹಳ್ಳಿಯೊಂದಕ್ಕೆ ಹೋಗಿ ಎರಡು ಅಥವಾ ಮೂರು ಗುಂಪುಗಳನ್ನು ಆಯ್ಕೆ ಮಾಡಿ(focus group) ಆ ಗುಂಪಿನೊಡನೆ ಚರ್ಚಿಸಿ, ಪ್ರಸ್ತುತದ ಜ್ವಲಂತ ಸಮಸ್ಯೆಗಳನ್ನು ಗುರ್ತಿಸಿ. ಪ್ರಸಾರವಾದ ಕಾರ್ಯಕ್ರಮದಲ್ಲಿ ಈ ವಿಷಯಗಳು ಸಂಭಂದಿತ ಸಮಸ್ಯೆಗಳು ಚರ್ಚಿತವಾದವೇ ಗುರ್ತಿಸಿ.
  • ಪ್ರತಿದಿನದ ಕಾರ್ಯಕ್ರಮಗಳ ವಿಷಯವನ್ನು ನಿರ್ಧರಿಸುವವರು ಯಾರು?
  • ಸಮುದಾಯದ ಸದಸ್ಯರು ತಮ್ಮ ಆಯ್ಕೆಯ ಕಾರ್ಯಕ್ರಮಗಳನ್ನು ನಡೆಸಿಕೊಡಲು ಮುಂದೆ ಬರುತ್ತಾರಾ?
  • ಸಮುದಾಯ ಭಾಗವಹಿಸುವ ಮಟ್ಟ ಯಾವುದು? ಯಾವ ಸಮಯದಲ್ಲಿ ಸಮುದಾಯದ ಭಾಗವಹಿಸುವಿಕೆ ಹೆಚ್ಚಿರುತ್ತದೆ. ಕಾರ್ಯಕ್ರಮದ ಯಾವ ವಿಭಾಗಗಳಲ್ಲಿ ಸಮುದಾಯದ ಆಸಕ್ತಿ ಇದೆ. ರಚನೆ, ವಿಷಯದ ಆಯ್ಕೆ, ವಿಷಯ ನಿರೂಪಣಾ ವಿಧಾನ, ಬೆಳವಣಿಗೆ ಅಥವಾ ಕೇವಲ ಪೂರ್ವ ನಿರ್ಧರಿತ ಕಾರ್ಯಕ್ರಮಗಳಲ್ಲಿ ಮಾತನ್ನಾಡುವುದು.
  • ಆದಿವಾಸಿ, ದಲಿತ, ಹಿಂದುಳಿದ ವರ್ಗ, ಜಾತಿ, ಅಂಗವಿಕಲ, ಮಹಿಳೆ, ಹಿರಿಯನಾಗರೀಕರು, ಮಕ್ಕಳು ಇತರೆ ಅಲ್ಪಸಂಖ್ಯಾತ ವರ್ಗಗಳು ಸಮುದಾಯ ರೇಡಿಯೋ ಕೇಂದ್ರದ ನಿರ್ವಹಣೆ, ಭಾಷೆ, ವಿಷಯಗಳಲ್ಲಿ ಪ್ರಾತಿನಿಧ್ಯವನ್ನು ಆಯ್ಕೆಯ ಸ್ವಾತಂತ್ರ್ಯವನ್ನು ಹೊಂದಿವೆಯೇ?
  • ವಾರದಲ್ಲಿ ಸರಾಸರಿ ಎಷ್ಟು ಜನ ಸ್ಟುಡಿಯೋಗೆ ಬೇಟಿ ನೀಡುತ್ತಾರೆ ಮತ್ತು ಯಾವ ಉದ್ದೆಶಕ್ಕೆ ?
  • ವಾರದಲ್ಲಿ ಬರುವ ಸರಾಸರಿ ದೂರವಾಣಿ ಕರೆಗಳೆಷ್ಟು ?
  • ತಿಂಗಳಲ್ಲಿ ಬರುವ ಪತ್ರಗಳ ಸಂಖ್ಯೆ ಎಷ್ಟು ?
  • ಸಂವಾದ ರೀತಿಯ ಕಾರ್ಯಕ್ರಮಗಳ ಸಂಖ್ಯೆ ಎಷ್ಟು?

ಉದಾ: ಪೋನ್ ಇನ್ ಶೋ. ಕಾರ್ಯಕ್ರಮದ ಕಡೆಯಲ್ಲಿ ಅನಿಸಿಕೆಯನ್ನು ಬಿತ್ರಿಸುತ್ತವೆಯೇ