Community Media/MARAA/Community Radio/Kannada/Management

From WikiEducator
Jump to: navigation, search



ಸಮುದಾಯ ರೇಡಿಯೊ ಯಶಸ್ಸಿಗೆ ಸಮೂಹ ಪ್ರತಿನಿಧಿಗಳಿಂದಲೇ ಆಗುವ ನಿರ್ವಹಣೆಯೇ ಕಾರಣ. ಅಂದರೆ ಸಮೂಹ ರೇಡಿಯೋ ನಿರ್ವಹಣೆಯಲ್ಲಿ ಅವರಿಗೆ ಸಾಧ್ಯವಿದ್ದಷ್ಟು ಅವಕಾಶವಿರಬೇಕು. ಕಾಯಿದೆ ರಿತ್ಯಾ, NGO/ಸಂಸ್ಥೆ ಲೈಸನ್ಸ್ ಹೊಂದಿದ್ದರೂ, ಅಧಿಕಾರದ ಹಸ್ತಾಂತರದಲ್ಲಿ ಇದು ಅಡ್ಡಿಯಾಗಬಾರದು. ಇದೇ ನಿಯಮದಲ್ಲಿ ಸಮುದಾಯ ರೇಡಿಯೋ ನಿರ್ವಹಣಾ ಸಮಿತಿಯು ತಾನು ನಡೆಸಲ್ಪಡುತ್ತಿರುವ ಸಮುದಾಯದ ಪ್ರಾತಿನಿಧಿತ ಸ್ವರೂಪದ್ದಾಗಿರಬೇಕು ಎಂದಿರುವುದು ಗಮನಾರ್ಹ. ರೇಡಿಯೋ ಕೇಂದ್ರವು ಸಮುದಾಯಕ್ಕಿಂತ ಭಿನ್ನವಾದರೂ, ಸಮುದಾಯದ ಒಂದು ಭಾಗವಾಗಿಯೇ ಗುರುತಿಸಲ್ಪಡುತ್ತದೆನ್ನುವುದು ಗಮನಾರ್ಹ.

ಹಣಕಾಸು

ಮಾಸಿಕ ಆದಾಯ ಮತ್ತು ವೆಚ್ಚಗಳನ್ನು ಗುರುತಿಸಿ ಅದನ್ನು ವಿವೇಚಿಸುವ ತರಬೇತಿಯನ್ನು ನಿರ್ವಹಣಾ ಸಮಿತಿಗೆ ನೀಡಬೇಕಾಗುತ್ತದೆ. ಈ ಅಂಕಿ ಅಂಶಗಳನ್ನು ಪಡೆದ ಸಮಿತಿಯು, ಅವಶ್ಯಕತೆಯಲ್ಲಿ ಅಧಿಕ ಆದಾಯ ಗಳಿಸುವ ಉಪಾಯಗಳನ್ನು ಅಥವಾ ಅಧಿಕ ಆದಾಯವಿದ್ದಲ್ಲಿ ರೇಡಿಯೋ ಕೇಂದ್ರದ ಒಳತಿಗೆ ಅದನ್ನು ವಿನಿಯೋಗಿಸುವ ವಿಧಾನಗಳನ್ನು ಗುರುತಿಸಬೇಕಾಗುತ್ತದೆ. ಗಳಿಕೆಗೆ ಹಲವಾರು ಮಾರ್ಗಗಳಿವೆ. ಉದಾ: ಒಂದು ಗಂಟೆಯ ಅವಧಿಯಲ್ಲಿ 5 ನಿಮಿಷಯ ಜಾಹಿರಾತು ಅಥವಾ ರೇಡಿಯೋ ಕೇಂದ್ರವನ್ನು ದೂರಸಂಪರ್ಕ ಕೇಂದ್ರವನ್ನಾಗಿ ಬಳಸುವುದು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸದಸ್ಯತ್ವ ಶುಲ್ಕ, ದಾನ ಇತ್ಯಾದಿಗಳನ್ನು ಸಮುದಾಯಕ್ಕೆ ತಕ್ಕಂತೆ ರೂಪಿಸಿಕೊಳ್ಳಬಹುದು.

ಸಾರಾಂಶ

DSC06709.JPG
  • ಅಧಿವೇಶನದ ಕಾಲ: ಆದಾಯ ಮತ್ತು ಖರ್ಚುಗಳನ್ನು ಗುರುತಿಸುವುದು.
  • ಉದ್ದೇಶ: ಸಾರ್ವತ್ರಿಕವಾಗಿ ಮತ್ತು ಆಂತರಿಕವಾಗಿ ಲೆಕ್ಕದಲ್ಲಿ ಪಾರದರ್ಶಕತ್ವ ತರುವುದು. ಮತ್ತು ಹಣಕಾಸಿನ ನಿರ್ವಹಣೆಯನ್ನು ಸಮಂಜಸವಾಗಿ ಮಾಡುವುದನ್ನು ಶಿಭಿರಾರ್ಥಿಗಳಿಗೆ ಕಲಿಸುವುದು.
  • ಸಮಯ: 90 ನಿಮಿಷ
  • ಅಧ್ಯಕ್ಷತೆ: ಯಾರಾದರು ನಿರ್ವಹಣಾ ಸಮಿತಿಯ ಸದಸ್ಯರು
  • ಸಿದ್ದತೆ: ರೇಡಿಯೋ ಕೇಂದ್ರದ ಅಧಿಕಾರಿಯನ್ನು ಸಂಪರ್ಕಿಸಿ, ಕಳೆದ ಮೂರು ತಿಂಗಳ ಲೆಕ್ಕ ಪಡೆಯುವುದು ಇದರಲ್ಲಿ ಆಯವ್ಯಯ ಪಟ್ಟಿ (ಬ್ಯಾಲೆನ್ಸ್ ಶೀಟ್) ಸಹ ಸೇರಿದಂತೆ ಮೂರು ತಿಂಗಳಲ್ಲಿ ಪಡೆದ ಹಣ ಮತ್ತು ಖರ್ಚಾದ ಹಣದ ಲೆಕ್ಕ ತರಬೇಕು.

ಚಟುವಟಿಕೆ1

ಶಿಬಿರಾರ್ಥಿಗಳು (ನಿರ್ವಹಣಾ ಸಮಿತಿಯ ಸದಸ್ಯರು) ವೃತ್ತಾಕಾರವಾಗಿ ಅಥವಾ ಗುಂಪುಗಳಲ್ಲಿ ಕುಳಿತುಕೊಳ್ಳಲಿ ಬೇರೆ ಬೇರೆ ಆಯವ್ಯಾಯ (ಬಜೆಟ್) ತಲೆಬರಹದಲ್ಲಿ ಖರ್ಚುಗಳನ್ನು ವರ್ಗೀಕರಿಸಲಿ.ಉದಾ:

  1. ಸಂಬಳ
  2. ಕಾರ್ಯಕ್ರಮ ರೂಪಣೆ
  3. ಸಾರಿಗೆ
  4. ಬರವಣಿಗೆ ಸಾಮಾಗ್ರಿಗಳು (ಸ್ಟೇಷನರಿ)
  5. ಸಂಪರ್ಕ
  6. ಮಾರುಕಟ್ಟೆ ಮತ್ತು ಜಾಹಿರಾತು ವೆಚ್ಚ
  7. ತರಬೇತಿ
  8. ತಾಂತ್ರಿಕ ಮೇಲುಸ್ತುವಾರಿ
  9. ಇತ್ಯಾದಿ

ಮುಂದಿನ ಹೆಜ್ಜೆ ಈ ಖರ್ಚುಗಳನ್ನು ವಿಶ್ಲೇಷಿಸುವುದು. ಉದಾ: 1000 ರೂಗಳಲ್ಲಿ 500 ರೂಪಾಯಿ ಸಾರಿಗೆ ವೆಚ್ಚವಾದರೆ, ತಕ್ಷಣವೇ ಯಾರಾದರೂ ಶೇ 50 ರ ಸಾರಿಗೆ ವೆಚ್ಚ ಹೆಚ್ಚೆಂದು ಹೇಳಬಹುದು. ಅಥವಾ ಕಾರ್ಯಕ್ರಮ ರೂಪಿಸುವ ಚೆವ್ವವನ್ನು ಹೆಚ್ಚಿಸಿ "ಪೋನ್ ಇನ್" ಉಪಕರಣಗಳನ್ನು ಕೊಂಡುಕೊಳ್ಳಬಹುದು. ಇದರಿಂದ ಸಾರಿಗೆ ವೆಚ್ಚ ಕಡಿಮೆಯಾಗಬಹುದು. ಆದರೆ ಸಮಿತಿ ಸದಸ್ಯರು ಖರ್ಚುಗಳನ್ನು ವಿಶ್ಲೇಷಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮತ್ತು ಈ ಖರ್ಚುಗಳು ರೇಡಿಯೋ ಕೇಂದ್ರದ ದೃಷ್ಟಿಯಿಂದ ಯಾವ ರೀತಿಯವು ಎಂಬುದನ್ನು ನಿರ್ಧಿಸಬೇಕು.

ಚಟುವಟಿಕೆ 2

ಹಾಗೆಯೇ ರೇಡಿಯೋ ಕೇಂದ್ರದ ಆದಾಯವನ್ನು ವಿವಿಧ ತಲೆಬರಹಗಳಡಿ ವರ್ಗೀಕರಿಸಬೇಕು. ಉದಾ:

  1. ಜಾಹಿರಾತು
  2. ಸದಸ್ಯತ್ವ ಶುಲ್ಕ
  3. ಪ್ರಯೋಜಕತ್ವ
  4. ಕೊಡುಗೆ
  5. ತರಬೇತಿಯಿಂದ ಆದಾಯ
  6. ಡಾಕ್ಯುಮೆಂಟೇಷನ್ ನಿಂದ ಆದಾಯ
  7. ಇತರೆ
DSC00834.JPG

ಈ ವರ್ಗೀಕರಣ ಮಾಡಿ ನಂತರ, ಮುಂದಿನ ಹೆಜ್ಜೆ ಆದಾಯದ ಪ್ರಮುಖ ಮೂಲವನ್ನು ಗುರ್ತಿಸುವುದು ಉದಾ: ಪ್ರತಿ 1000 ರೂಪಾಯಿ ಪ್ರಯೋಜಕತ್ವದಿಂದ ಬಂದು, 100 ರೂ ಜಾಹೀರಾತಿನಿಂದ ಬಂದರೆ, ಮಾರುಕಟ್ಟೆ (ಮಾರ್ಕೆಟಿಂಗ್) ತಂಡವು ಪ್ರಯೋಜಕ್ತವನ್ನು ಅದೇ ಮಟ್ಟದಲ್ಲಿ ಹಿಡಿದಿಡಬೇಕು ಮತ್ತು ಜಾಹಿರಾತಿಗಾಗಿ ಇನ್ನಷ್ಟು ಪ್ರಯತ್ನಿಸಬೇಕೆಂದು ನಿರ್ಧರಿಸಬಹುದು.

ಚಟುವಟಿಕೆ 3

ನಿರ್ವಹಣಾ ಸಮಿತಿ ಸದಸ್ಯರಿಗೆ ಹಣಕಾಸು ನಿರ್ವಹಣೆ ಮೂಲಭೂತ ಅಂಶಗಳನ್ನು ಬರೆಯಲು ಹೇಳಬೇಕು. ಅವು ಯಾವುವೆಂದರೆ,

  1. ಪಾರದರ್ಶಕತೆ
  2. ಲೆಕ್ಕಾಚಾರ ನಿರ್ವಹಣೆ
  3. ನಿರ್ವಹಣಾ ಕಾರ್ಯಕ್ಷಮತೆ

ಇದು ಆಂತರಿಕ ಮತ್ತು ಸಾರ್ವತ್ರಿಕ ಕ್ಷೇತ್ರಗಳೆರಡರಲ್ಲೂ ಕಾಣಬಹುದು. ಶಿಬಿರಾರ್ಥಿಗಳ ಅನಿಸಿಕೆಗಳನ್ನು ಕ್ರೂಢಿಕರಿಸಿ, ಚರ್ಚೆಗೆ ಅನುವು ಮಾಡಿಕೊಟ್ಟು ಮುಖ್ಯಾಂಶಗಳನ್ನು ನಿರ್ವಹಣಾ ಸಮಿತಿಯ ಪ್ರಣಾಳಿಕೆಯಲ್ಲಿ ಸೇರಿಸಬೇಕು.

ಕಾರ್ಯರೂಪಣೆ

ನಿರ್ವಹಣಾ ಸಮಿತಿಯು ಉತ್ಪಾದನಾ ತಂಡದಿಂದ ಮಾಸಿಕ ಮಾಸಿಕ ವರದಿ ಪಡೆಯಬೇಕು. ಇದರಿಂದ ಕಾರ್ಯಕ್ರಮ ವೈವಿಧ್ಯಗಳನ್ನು, ಅವುಗಳ ರೂಪುರೇಷೆಗಳನ್ನು, ಪ್ರಸಾರಕ್ಕೆ ಆಯ್ದುಕೊಂಡ ವಿಷಯಗಳನ್ನು ವಿಶ್ಲೇಷಿಸಲು ಸಹಕಾರಿಯಾಗುತ್ತದೆ. ಅವರುಗಳು ಸಮುದಾಯದ ಸದಸ್ಯರು ಆದ್ದರಿಂದ, ವಿಷಯಗಳ ಸೂಕ್ತತೆಗಳನ್ನು ನಿರ್ಧರಿಸಿ, ಉತ್ಪಾದನಾ ತಂಡಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬಲ್ಲವರಾಗಿರುತ್ತಾರೆ.

ಸಾರಾಂಶ

  • ಅಧಿವೇಶನದ ಕಾಲ: ವಿಷಯ ನಿರ್ವಹಣೆ
  • ಉದ್ದೇಶ: ರೇಡಿಯೋ ಕೇಂದ್ರದ ಕಾರ್ಯಕ್ರಮಗಳನ್ನು ನಿರ್ವಹಿಸಲು ಬೇಕಾದ ನೈತಿಕ ಸಾಧನಗಳು ಮತ್ತು ಉತ್ತಮಗೊಳಿಸುವ ಸಾಧನಗಳು.
  • ಸಮಯ:120 ನಿಮಿಷಗಳು
  • ಅದ್ಯಕ್ಷತೆ: ಗುಂಪಿನಿಂದ ಆಯ್ಕೆಯಾದ ವ್ಯಕ್ತಿ
  • ಸಿದ್ದತೆ: ಹಿಂದಿನ ವಾರದ ಕಾರ್ಯಕ್ರಮಗಳನ್ನು ಸಂಗ್ರಹಿಸಿದ ಅಡಕ ಮುದ್ರಿಕೆ ಪಟ್ಟಿಯ ನಕಲು

ಚಟುವಟಿಕೆ 1

ಕಾರ್ಯಕ್ರಮ ಪಟ್ಟಿಯನ್ನು ಎಲ್ಲರಿಗೂ ತೋರಿಸಿ, ಎಲ್ಲರಿಗೂ ಒಂದೊಂದು ಪಟ್ಟಿಯನ್ನು ನೀಡಬೇಕು. ಅದರಲ್ಲಿ ಎಲ್ಲರೂ ತಮ್ಮ ಅನಿಸಿಕೆ, ವಿಶ್ಲೇಷಣೆ ಮತ್ತು ಅಭಿಪ್ರಾಯಗಳನ್ನು ಕೆಳಗಿನ ಅಂಶಗಳಂತೆ ಬರೆಯಬೇಕು.

  1. ಕೇಂದ್ರದ ಪ್ರಸಾರ ಮಿತಿಯ ಎಲ್ಲಾ ಭಾಗಗಳೂ ಕಾರ್ಯಕ್ರಮದಲ್ಲಿ ಸಾಕಷ್ಟು ಪ್ರಾಶಸ್ತ್ಯ ಪಡೆದಿವೆಯಾ
  2. ಪ್ರಸಾರಕ್ಕೆ ಆಯ್ಕೆಗೊಂಡ ವಿಷಯಗಳು ನೈಜವಾದುವೇ
  3. ಅವು ಆಸಕ್ತಿದಾಯಕವೇ? ಇಲ್ಲವೇ ? ಏಕೆ ?

ಈ ಅಭಿಪ್ರಾಯಗಳನ್ನು ಕ್ರೂಢೀಕರಿಸಿ, ಚರ್ಚಿಸಿ, ಕಾರ್ಯಕ್ರಮ ಪಟ್ಟಿಗೆ ಅಗತ್ಯವಾದ ಬದಲಾವಣೆ ತರುವುದು.

ಚಟುವಟಿಕೆ 2

MG 5535.JPG

ಕಳೆದ ವಾರದ ಎಲ್ಲಾ ಕಾರ್ಯಕ್ರಮಗಳ ಹೆಸರನ್ನು ಚೀಟಿಗಳಲ್ಲಿ ಬರೆದು ಕುಲುಕಿ, ಒಂದನ್ನು ತೆಗೆಯಿರಿ. ತೆಗೆದ ಚೀಟಿಯಲ್ಲಿನ ಕಾರ್ಯಕ್ರಮವನ್ನು ಎಲ್ಲರಿಗೂ ಕೇಳಿಸಿ. ನಿರ್ವಹಣಾ ಸಮಿತಿಯ ಸದಸ್ಯರಿಗೆ ಕೆಳಗಿನ ಅಂಶಗಳಿಗೆ ಅನುಗುಣವಾಗಿ ಅದನ್ನು ಮೌಲ್ಯಮಾಪನ ಮಾಡಲು ತಿಳಿಸಿ.

  • ಕಾರ್ಯಕ್ರಮ ಸಂಪೂರ್ಣ ಅವಧಿಯವರೆಗೆ ನಿಮ್ಮ ಗಮನವನ್ನು ಹಿಡಿದಿಟ್ಟಿಕೊಂಡಿತೇ ? ಇಲ್ಲವೇ ? ಏಕೆ ?
  • ತಾಂತ್ರಿಕವಾಗಿ ಕಾರ್ಯಕ್ರಮದ ಮಟ್ಟ 1 ರಿಂದ 5, 1 ಅತ್ಯಂತ ಕಡಿಮೆ
  • ವಿಷಯ ಸಮುದಾಯಕ್ಕಾಗಲೀ, ಸಮುದಾಯದ ಗುಂಪಿಗಾಗಲೀ ಅನ್ವಯವಾಗಿತ್ತೆ?
  • ಕಾರ್ಯಕ್ರಮದ ರೂಪುರೇಷೆ ಮತ್ತು ಅವದಿಯ ಬಗ್ಗೆ ಅನಿಸಿಕೆ.
  • ಕಾರ್ಯಕ್ರಮದ ನ್ಯೂನತೆ ಮತ್ತು ಶಕ್ತಿಯ ಬಗೆಗೆ ಮೂರು-ಮೂರು ಅಂಶಗಳು.

ಇದನ್ನು ಐದು ಬಾರಿ ಪುನರಾವರ್ತಿಸಿ. ಇದು ನಿರ್ವಹಣಾ ಸಮಿತಿಯ ಮುಂದಿನ ಎಲ್ಲಾ ಸಭೆಗಳಲ್ಲೂ ಇರುವಂತೆ ನಿರ್ಧರಿಸಿ. ಕಾರ್ಯಕ್ರಮ ರೂಪಣ ಸಿಬ್ಬಂದಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೌಲ್ಯ ಮಾಪನ ಮಾಡಿದರೆ ಇನ್ನೂ ಚೆನ್ನ. ಈ ಕಾರ್ಯಕ್ರಮದ ಪ್ರತಿ ಸುತ್ತಿನ ನಂತರ ಅಭಿಪ್ರಾಯ ಕ್ರೂಢೀಕರಣೆ, ಚರ್ಚೆ ಮತ್ತು ಕಾರ್ಯಕ್ರಮ ಮುಂದುವರೆಯುವ ರೂಪುರೇಷೆಗಳನ್ನು ನಿರ್ಧರಿಸಬೇಕು. ಕಾರ್ಯಕ್ರಮದ ಸಾಧಕಗಳೆಡೆಗೆ ಗಮನ ಹರಿಸಿ ಅವನ್ನು ಮುಂದುವರೆಸುವಂತೆ ಪ್ರೋತ್ಸಾಹಿಸಬೇಕು.

ಸಿಬ್ಬಂದಿ

ನಿರ್ವಹಣಾ ಸಮಿತಿಯು ಕಾಲಕಾಲಕ್ಕೆ ಸಭೆ ಸೇರಿ ಸಮುದಾಯ ರೇಡಿಯೋ ಕೇಂದ್ರದ ಕಾರ್ಯತತ್ಪರತೆಯ ಮೌಲ್ಯಮಾಪನ ಮಾಡಬೇಕು. ಮತ್ತು ಅಧಿಕ ಸಿಬ್ಬಂದಿಯ ಅವಶ್ಯಕತೆಯ ಬಗ್ಗೆ ನಿರ್ಧಾರ ಮಾಡಬೇಕು. ಪ್ರಸ್ತುತ ಸಿಬ್ಬಂದಿಯ ಕಾರ್ಯಕ್ರಮವನ್ನು ಮಾಪನ ಮಾಡಬೇಕು. ಜೊತೆಗೆ ಹೊಸ ಸ್ವಯಂಸೇವಕರ ತರಬೇತಿಯ ಬಗ್ಗೆಯೂ, ಹೊಸ ದ್ವನಿಗಳನ್ನು ಕಾರ್ಯಕ್ರಮಗಳಿಗೆ ಪಡೆಯುವ ಬಗ್ಗೆ ಮತ್ತು ಅಲ್ಪ ಸಂಖ್ಯಾತ ಸಮುದಾಯನ್ನು ಕಾರ್ಯಕ್ರಮ ರೂಪಿಸುವಲ್ಲಿ ತೊಡಗಿಸಿಕೊಳ್ಳುವತ್ತಲೂ ಸೂಕ್ತ ಸಲಹೆ ಸೂಚನೆಗಳನ್ನು ನೀಡಬಹುದು.

50x
  • ಅಧಿವೇಶನದ ಕಾಲ: ಸಮುದಾಯ ರೇಡಿಯೋ ಕೇಂದ್ರ ಸಿಬ್ಬಂದಿ ನಿರ್ವಹಣೆ.
  • ಉದ್ದೇಶ: ಶಿಭಿರಾರ್ಥಿಗಳಿಗೆ ವೇತನ ಸಹಿತ ಸಿಬ್ಬಂದಿ ನಿರ್ವಹಣೆ ಮತ್ತು ಸ್ವಯಂಸೇವಕರ ಸಂಸ್ಕೃತಿಗಳ ನಿರ್ವಣೆಯ ಬಗ್ಗೆ ತಿಳುವಳಿಕೆ.
  • ಅವಧಿ: 90 ನಿಮಿಷ
  • ಅದ್ಯಕ್ಷ: ಶಿಬಿರಾರ್ಥಿಗಳಿಂದ ಆಯ್ಕೆಗೊಂಡ ಒಬ್ಬರು
  • ಸಿದ್ದತೆ: ಮಾಸಿಕ ವರದಿ/ ದಾಖಲೆಗಳನ್ನು ಕಾರ್ಯಕ್ರಮ ರೂಪಣಾ ಸಿಬ್ಬಂದಿಯಿಂದ ಚರ್ಚೆಗಾಗಿ ಪಡೆಯುವುದು.

ಚಟುವಟಿಕೆ 1

ಕಾರ್ಯಕ್ರಮ ರೂಪಣಾ ಸಿಬ್ಬಂದಿಯನ್ನು ನಿರ್ವಹಣಾ ಸಮಿತಿಯ ಸದಸ್ಯರ ಮುಂದೆ ಕಳೆದ ತಿಂಗಳ ತಮ್ಮ ಅನುಭವವನ್ನು ಹೇಳಿಕೊಳ್ಳುವಂತೆ ಕೇಳುವುದು. ಕಾರ್ಯಕ್ರಮ ರೂಪಿಸುವರಲ್ಲಿರಬಹುದಾದ ಚಾಲೆಂಜ್ ಗಳ ಬಗ್ಗೆ ಚರ್ಚೆ ನಡೆಸುವುದು. ಉದಾ: ವರದಿಗಾರರು ಸರ್ಕಾರಿ ಸುದ್ದಿ ಸಂಗ್ರಹಕ್ಕಾಗಿ ತೆರಳಿದಾಗ ಅವರು ಗುರುತಿಸಲ್ಪಟ್ಟ ಮಾದ್ಯಮಪ್ರತಿನಿಧಿಗಳಲ್ಲವೆಂದು ಸುದ್ದಿ ನಿರಾಕರಿಸುವುದು. ಮತ್ತು ಕಾರ್ಯಕ್ರಮ ರೂಪಣಾ ತಂಡಕ್ಕೆ ಅನುಕೂಲವಾಗುವಂತೆ ನಿರ್ವಹಣಾ ಸಮಿತಿ ತೆಗೆದುಕೊಳ್ಳಬಹುದಾದ ನಿರ್ಣಯಗಳ ಬಗ್ಗೆ ಸಲಹೆ ಪಡೆಯುವಿಕೆ. ಈ ಸೆಷನ್ (ಅಧಿವೇಶನದ ಕಾಲ) ನಂತರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ, ಕಾರ್ಯಕಾರಿ ಅಂಶಗಳನ್ನು ಗುರುತಿಸುವಿಕೆ.

ಚಟುವಟಿಕೆ 2

ಪ್ರತಿಯೊಬ್ಬ ಶಿಬಿರಾರ್ಥಿಗೂ, ಒಂದು ವರದಿ ಅಥವಾ ದಾಖಲೆಯನ್ನು ಅಭ್ಯಸಿಸುವಂತೆ ತಿಳಿಸುವುದು. ಮತ್ತು ಅವರ ಅನಿಸಿಕೆ, ಅಬಿಪ್ರಾಯಗಳನ್ನು ಬರೆದುಕೊಂಡು ಎಲ್ಲರಿಗೂ ತಿಳಿಸುವಂತೆ ನಿರೂಪಿಸುವುದು. ಇರಲ್ಲಿ ನಿರ್ವಹಣಾ ದೃಷ್ಟಿಯಿಂದ ವರದಿಯಲ್ಲಿ ಕಲಿತ ಪಾಠ ಮತ್ತು ಮುಂದಿನ ಸವಾಲುಗಳನ್ನು ಗುರುತಿಸಬೇಕು.

ತಾಂತ್ರಿಕತೆ

DSC00989.JPG

ನಿರ್ವಹಣಾ ಸಮಿತಿಯು ಸಮುದಾಯ ರೇಡಿಯೋ ಕೇಂದ್ರದಲ್ಲಿ ಬಳಕೆಯಾಗುವ ವಿವಿಧ ತಂತ್ರಜ್ಞಾನವನ್ನು ಉಳಿಸಿಕೊಳ್ಳುವ ಅಥವಾ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ನಿರ್ಧಾರವನ್ನು ಸಮುದಾಯದ ಅವಶ್ಯಕತೆಗಳಿಗನುಗುಣವಾಗಿ ಕೈಗೊಳ್ಳಬೇಕಾಗುತ್ತದೆ. ನಿರ್ವಹಣಾ ವೆಚ್ಚ ಕಮ್ಮಿಯಾಗಿರುವಂತೆ ಚಾಲ್ತಿ ತಂತ್ರಜ್ಞಾನದ ಉಸ್ತುವಾರಿ ಮಾಡುವ ನಿರ್ಧಾರಗಳನ್ನು ನಿರ್ವಹಣಾ ಸಮಿತಿ ತೆಗೆದುಕೊಳ್ಳಬೇಕಾಗುತ್ತದೆ.

ಚಟುವಟಿಕೆ 1

  • ಅಧಿವೇಶನದ ಕಾಲ: ರೇಡಿಯೋ ಕೇಂದ್ರದಲ್ಲಿ ಒಂದು ದಿನ
  • ಉದ್ದೇಶ: ರೇಡಿಯೊ ಕೇಂದ್ರದ ತಂತ್ರಜ್ಞಾನದ ಬಗ್ಗೆ ಪ್ರಾತ್ಯಕ್ಷಿಕೆ.
  • ಅದ್ಯಕ್ಷ: ಉತ್ಪಾದನಾ ತಂಡದ ಸಿಬ್ಬಂದಿ.
DSC00986.JPG

ರೇಡಿಯೋ ಕೇಂದ್ರಕ್ಕೆ ನಿರ್ವಹಣಾ ತಂಡವನ್ನು ಒಂದು ದಿನದ ಮಟ್ಟಿಗೆ ಕೊಂಡೊಯ್ಯಿರಿ. ಸ್ಟುಡಿಯೋನಿಂದ ಪ್ರಾರಂಭಿಸಿ, ಮೈಕ್ರೋಪೋನ್ ನಿಂದ ಹಿಡಿದು, ಎಲ್ಲವನ್ನೂ ತೋರಿಸಿರಿ. ತಂಡದ ಸದಸ್ಯರೊಬ್ಬರು ಮೈಕಿನಲ್ಲಿ ಮಾತಾಡುವಾಗ ಧ್ವನಿಯನ್ನು ಗುರುತಿಸಿರಿ. ಅದರಲ್ಲಿರುವ ಎಲ್ಲವನ್ನೂ ಸಂಕ್ಷಿಪ್ತವಾಗಿ, ಸರಳವಾಗಿ ವಿವರಿಸಿ. ಮೈಕಿನಿಂದ ಸಂಕಲನಕ್ಕೆ, ಕಂಪ್ಯೂಟರ್ ನಿಂದ ಸೌಂಡ್ ಕಾರ್ಡಿಗೆ ಧ್ವನಿ ಹರಿದು ಬರುವ ರೀತಿಯನ್ನು ತೋರಿಸಿ. ಸಂಕಲನ ವ್ಯವಸ್ಥೆಯಲ್ಲಿ ಧ್ವನಿ ಅಲೆಗಳಾಗಿ ಹರಿಯುವುನ್ನು ತೋರಿಸಿ. ಅದನ್ನು ತಿದ್ದುವ ವಿಧಾನಗಳನ್ನು ತಿಳಿಸಿ. ನಿರ್ವಹಣಾ ಸಮಿತಿ ಸದಸ್ಯರು ಮಾತಾಡಿ ಮುದ್ರಿಸುವಂತೆ ಪ್ರೇರೇಪಿಸಿ. ಅದನ್ನು ಸಂಕಲಿಸಿ, ಇದಕ್ಕೆ ಎಷ್ಟು ಸಮಯ ಹಿಡಿಯಬಹುದು ಎಂಬ ಅಂದಾಜು ಅವರಿಗೆ ಸಿಗಲಿ. ಶಿಬಿರಾರ್ಥಿಗಳನ್ನು ರೆಡಿಯೋ ಕೇಂದ್ರದ ಸಮೀಪದ ಹೊರಾಂಗಣಕ್ಕೆ ಕರೆದೊಯ್ಯಿರಿ, ಹೊರಾಂಗಣ ಮುದ್ರಿಕರಣದ ಘಟಕದ ಕೆಲಸವನ್ನು ವಿವರಿಸಿ, ಧ್ವನಿ ಮುದ್ರಿಸಿ ತೋರಿಸಿ. ಮತ್ತೆ ಅವರನ್ನು ಸ್ಟುಡಿಯೋಗೆ ಕರೆದೊಯ್ದು, ಅದನ್ನು ಸಂಕಲನ ಮಾಡುವುದನ್ನು ತೋರಿಸಿಕೊಡಿ. ಸಮಿತಿಯ ಸದಸ್ಯರನ್ನು ಸ್ಟುಡಿಯೋದಲ್ಲಿ ಕೂರಿಸಿ ಕಾರ್ಯಕ್ರಮ ಪ್ರಸಾರ ಮಾಡುವುದನ್ನು ತೋರಿಸಿ. ಈ ಸಮಯದಲ್ಲಿ ಲೈವ್ ಶೋ ಅಥವಾ ಪೋನ್ ಇನ್ ಕಾರ್ಯಕ್ರಮ ಇದ್ದರೆ ಒಳ್ಳೆಯದು. ಈ ಕಾರ್ಯಕ್ರಮದ ಮಧ್ಯೆ ಅವರನ್ನು ಹೊರಗೆ ಕರೆದುಕೊಂಡು ಹೋಗಿ ಟ್ರಾನ್ಸ್ ಮೀಟರ್, ಟವರ್ ಮತ್ತು ಆಂಟೇನಾಗಳನ್ನು ತೋರಿಸಿ. ಸ್ಟುಡಿಯೋದಿಂದ ಹೊರ ಬಂದ ಸಿಗ್ನಲ್ ಇವುಗಳಿಂದ ಹೇಗೆ ಪ್ರಸಾರವಾಗುತ್ತದೆಂದು ತೋರಿಸಿ. ಆಂಟೆನಾ ಎತ್ತರಕ್ಕೂ, ಶಕ್ತಿಗೂ ಇರುವ ಸಂಭಂದವನ್ನು ವಿವರಿಸಿ. FM ಪ್ರಸಾರದಲ್ಲಿ ಎತ್ತರದ ಮರವೋ, ಕಟ್ಟಡವೋ ಊಂಟು ಮಾಡಬಹುದಾದ ಅಡ್ಡಿಗಳನ್ನು ವಿವರಿಸಿ. ಕಡೆಯಲ್ಲಿ ಸಮಿತಿ ಸದಸ್ಯರ ಅನುಭವಗಳನ್ನು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಬಿಡಿ. ತಾಂತ್ರಿಕ ಸಿಬ್ಬಂದಿಯೊಬ್ಬರು ಸಮಿತಿಯ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲಿ.


ಪರಿಣಾಮ

ಇದು ಅತಿ ಮುಖ್ಯವಾದುದು. ಸಮಿತಿಯು ಆಗಾಗ್ಗೆ ರೆಡಿಯೋ ಕೇಂದ್ರದ ಕಾರ್ಯಕ್ರಮಗಳು ಸಮುದಾಯಕ್ಕೆ ಸಹಾಯವಾಗುತ್ತದೆಯೇ ಎಂದು ಪರೀಕ್ಷಿಸುತ್ತಿರಬೇಕು. ಅಂದರೆ ಚಾಲ್ತಿ ಸಮಸ್ಯೆಗಳ ಅರಿವು ಸಮಿತಿಯ ಸದಸ್ಯರಿಗಿರಬೇಕು. ಅವನ್ನು ಎದುರಿಸುವ ರೀತಿಯ ಬಗ್ಗೆ ಮತ್ತು ಸಮುದಾಯದ ಬೇಕು ಬೇಡಗಳ ಬಗ್ಗೆ ಸಮಿತಿಯ ಸದಸ್ಯರಿಗೆ ಅರಿವಿರಬೇಕು. ಪರಿಣಾಮಗಳನ್ನು ವಿಶ್ಲೇಷಿಸಿದ ನಂತರ ಸಮಿತಿಯು ಕಾರ್ಯಕ್ರಮ, ಹಣಕಾಸು, ಸಿಬ್ಬಂದಿ ಇತರೆ ವಿಷಯಗಳಲ್ಲಿ ನಿರ್ಧಾರ ಕೈಗೊಳ್ಳಲು ಸಮರ್ಥವಾಗಿರುತ್ತದೆ.

ಚಟುವಟಿಕೆ 1

  • ಅಧಿವೇಶನದ ಕಾಲ: ಲಿಂಗ
  • ಅವಧಿ: 90ನಿಮಿಷಗಳು
  • ಅಧ್ಯಕ್ಷ: ಸಮಿತಿಯ ಸದಸ್ಯ
  • ಉದ್ದೇಶ: ರೇಡಿಯೋ ಕೆಂದ್ರದಿಂದ ಸಮುದಾಯದ ಮೇಲೆ ಪರಿಣಾಮ.
ಐದು ಮಾದರಿ (ಸ್ಯಾಂಪಲ್) ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಸಮಿತಿಗೆ ನೀಡಿ. ಮತ್ತು ಅವುಗಳ ಕೇಳುಗರ ಬಗೆಗಿನ ಇತ್ತೀಚಿನ ಸಮೀಕ್ಷಾ ವರದಿಯನ್ನು ನೀಡಿ. ಅದನ್ನು ಗಮನಿಸಿದ ಸದಸ್ಯರು, ಕಾರ್ಯಕ್ರಮದ ಸಾಮಾಜಿಕ ಪರಿಣಾಮವನ್ನು (ಲಿಂಗಭೇದ) ದೃಷ್ಟಿಯಿಂದ ಹೇಳಬೇಕು.
DSC02024.JPG

ಕೆಳಗಿನ ಅಂಶಗಳನ್ನು ಪರಿಗಣಿಸಬಹುದು.

  1. ಕಾರ್ಯಕ್ರಮಗಳಲ್ಲಿ ಹೆಂಗಸರ ಭಾಗವಹಿಸುವಿಕೆ
  2. ಮಹಿಳೆಯರ ಬಗ್ಗೆ ಕಾರ್ಯಕ್ರಮ.
  3. ಮಹಿಳಾ ಕೇಳುಗರ ಅಭಿಪ್ರಾಯ.

ಸಮಿತಿಯನ್ನು ಸಣ್ಣ ಗುಂಪುಗಳಾಗಿ ವಿಭಾಗಿಸಿ, ಪ್ರತಿ ಗುಂಪು ಸಹ ರೇಡಿಯೋ ಕೇಂದ್ರವನ್ನು ಲಿಂಗಬೇಧ ದೃಷ್ಟಿಯಿಂದ ಗಮನಿಸಿ ಐದು ನಿಮಿಷಗಳ ಅಭಿಪ್ರಾಯ ಮಂಡನೆ ಮಾಡಲಿ. ಸಾಧಕ ಭಾದಕಗಳ ಕುರಿತು ಸಣ್ಣ ಚರ್ಚೆ ನಡೆದು, ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳಲಿ.

ಚಟುವಟಿಕೆ 2

  • ಅಧಿವೇಶನದ ಕಾಲ: ವೈಯಕ್ತಿಕ ಮತ್ತು ಸಮುದಾಯ
  • ಅವಧಿ: 180 ನಿಮಿಷಗಳು
  • ಅಧ್ಯಕ್ಷತೆ: ಸಮಿತಿ ಸದಸ್ಯರು
  • ಉದ್ದೇಶ: ವೈಯಕ್ತಿಕ ಅಭಿಪ್ರಾಯಗಳಿಗೂ ಮತ್ತು ಸಮುದಾಯದ ಆಶಯಗಳಿಗೂ ಇರುವ ವ್ಯತ್ಯಾಸವನ್ನರಿಯುವುದು.
    MG 5588.JPG

ನಿರ್ವಹಣಾ ಸಮಿತಿಯ ಅಣಕು ಸಭೆ ನಡೆಸಿರಿ. ಅಲ್ಲಿ ಹಣಕಾಸು ವರದಿ, ಮಾಸಿಕ ವರದಿ, ವೇಳಾಪಟ್ಟಿಯ ವರದಿ, ಕೇಳುಗರ ವರದಿಗಳನ್ನು ಮಂಡಿಸಲಿ. ಕಡೆಯಲ್ಲಿ ಸಮಿತಿಯ ಎಲ್ಲಾ ಸದಸ್ಯರಿಗೂ ತಮ್ಮ ಅಭಿಪ್ರಾಯ ಮಂಡನೆಗೆ ಅವಕಾಶ ಇರಲಿ. ಮೊದಲನೆಯದು ವೈಯಕ್ತಿಕ ಭಿಪ್ರಾಯವಾಗಿದ್ದು, ಎರಡನೆಯದು ಅಧಿಕಾರದ (ಅಫಿಷಯಲ್) ಅಭಿಪ್ರಾಯವಾಗಿರಲಿ. ಮೂರು ನಿಮಿಷಗಳ ಅವದಿಯನ್ನು ನಿಗದಿಪಡಿಸಿ. ಕಡೆಯಲ್ಲಿ ಎರಡು ಅಭಿಪ್ರಾಯಗಳನ್ನು ಗಮನಿಸಿ. ಸಮಿತಿ ಸದಸ್ಯರಾಗಿ ಸಾಮಾಜಿಕ ಹೊಣೆಗಾರಿಕೆಯ ಹಾಗೂ ಜವಾಬ್ದಾರಿಯನ್ನು ಗುರುತಿಸುವ ಬಗ್ಗೆ ಚರ್ಚೆ ನಡೆಯಲಿ. ಸಾಮಾಜಿಕ ನಾಯಕರಾಗಿ ಎಲ್ಲಾ ವರ್ಗಗಳ ಹಿತಾಸಕ್ತಿ ಕಾಯ್ದು ಕೊಳ್ಳಬೇಕೆನ್ನುವುದು ಅವರು ಅರಿಯಲಿ. ಬಹುಶಃ ವೈಯಕ್ತಿಕ ಮತ್ತು ಸಾಮುದಾಯಿಕ ಅಭಿಪ್ರಾಯಗಳು ಒಂದೆಡೆ ಒಂದೇ ಆಗಿದ್ದು, ಬೆಳೆದಂತೆ ಬೇರೆಯಾಗುವುದನ್ನು ಗುರತಿಸಬಹುದು. ಇದು ನಿರ್ವಹಣಾ ವ್ಯವಸ್ಥೆಯ ಬಗ್ಗೆ ಸದಸ್ಯರಿಗೆ ಹೆಚ್ಚಿನ ಮಾಹಿತಿ ನೀಡಿ. ರೇಡಿಯೋ ಕೇಂದ್ರದ ಪರಿಣಾಮದ ಬಗ್ಗೆ ಸಮಗ್ರ ಚಿತ್ರಣ ನೀಡಲು ನೆರವಾಗುತ್ತದೆ.